ಯಲ್ಲಾಪುರ: ಭಾರೀ ಮಳೆ-ಗಾಳಿಯಿಂದಾಗಿ ತಾಲೂಕಿನ ಚಂದಗುಳಿ ಗ್ರಾಪಂ ವ್ಯಾಪ್ತಿಯ ಸಹಳ್ಳಿಯಲ್ಲಿ ಮನೆಯೊಂದು ಕುಸಿದು ಭಾರಿ ನಷ್ಟ ಉಂಟಾಗಿದೆ. ಸಹಸ್ರಳ್ಳಿಯ ನಿವಾಸಿ ರಾಮಚಂದ್ರ ಗೋಪಾಲ ಭಟ್ಟ ಬೆಳಸೂರು ಅವರ ವಾಸದಮನೆ ಸಂಪೂರ್ಣ ಕುಸಿದಿದೆ. ಗೋಡೆ ಕುಸಿದು, ಮನೆಯ ಹೆಂಚುಗಳು ಪುಡಿಯಾಗಿದೆಯಲ್ಲದೇ, ಮನೆಯೊಳಗಿನ ಗೃಹೋಪಯೋಗಿ ವಸ್ತುಗಳು ನಾಶವಾಗಿವೆ. ಮನೆ ಕುಸಿತದಿಂದ ರಾಮಚಂದ್ರ ಭಟ್ಟರ ಕುಟುಂಬ ತೀವ್ರ ಸಂಕಷ್ಟಕ್ಕೊಳಗಾಗಿದೆ. ಚಂದಗುಳಿ ಗ್ರಾಪಂ ಉಸ್ತುವಾರಿ ಅಧಿಕಾರಿ ಡಾ.ಸುಬ್ರಾಯ ಭಟ್ಟ, ಗ್ರಾಪಂ ಸದಸ್ಯರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಹೆಬ್ಬಾರ್ ಕಾರವಾರ ಭೇಟಿ : ಅಧಿಕಾರಿಗಳೊಂದಿಗೆ ಸಭೆ
ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಆ.7 ರಂದು ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಿ ಪ್ರವಾಹ ಹಾನಿ ಮತ್ತು ಕೊರೊನಾ ನಿಯಂತ್ರಣ ಸಭೆ ನಡೆಸಲಿದ್ದಾರೆ.
ಸಚಿವ ಹೆಬ್ಬಾರ್ ಬೆಳಿಗ್ಗೆ ಯಲ್ಲಾಪುರದಿಂದ ಹೊರಟು ಕಾರವಾರಕ್ಕೆ 10.30ಕ್ಕೆ ತಲುಪಿದ್ದು. ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರೊನಾ ಮೂರನೇ ಅಲೆ ಮತ್ತು ಪ್ರವಾಹದಿಂದಾದ ಹಾನಿ ಬಗ್ಗೆ ಅಧಿಕಾರಿಗಳೊಟ್ಟಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ ಕಾಳಿ ನದಿ ಸುತ್ತಲಿನ ಪ್ರದೇಶಗಳಾದ ಮಲ್ಲಾಪುರ, ಕದ್ರಾ ಹಾಗೂ ಅಣಶಿ ಘಾಟ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವರು.