ಭಟ್ಕಳ : ನಿನ್ನೆ ಕಾರ್ಯಾಚರಣೆ ನಡೆಸಿದ ಎನ್‌ಐಎ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಲ್ಪಟ್ಟ ಜುಫ್ರಿ ಜವಾಹರ್ ದಾಮುದಿ ವಿಚಾರಣೆ ಪ್ರಾರಂಭವಾಗಿದ್ದು, ಈ ಬಗ್ಗೆ ತನಿಖೆ ತೀವ್ರಗೊಂಡಿದೆ.
ಮಂಕಿಯ ಪೋಲಿಸ್ ಠಾಣೆಯ ಮೇಲಿನ ಮಹಡಿಯಲ್ಲಿ ಇರಿಸಿಕೊಂಡು ವಿಚರಣೆ ನಡೆಸಲಾಗಿತ್ತು ಎಂದು ಹೇಳಲಾಗುತ್ತಿದೆ. ಈತನನ್ನು ನಿನ್ನೆ ಮಂಕಿ ಪೋಲಿಸ್ ಠಾಣೆಯ ಪ್ರತೇಕ ಕೋಠಡಿಯಲ್ಲಿ ವಿಚಾರಣೆ ನಡೆಸಿ, ಶನಿವಾರ ತಾಲೂಕ ಆಸ್ಪತ್ರೆಯಲ್ಲಿ ಆರೊಗ್ಯ ತಪಾಸಣೆ ನಡೆಸಿ ಹೊನ್ನಾವರದ ಸಿವಿಲ್ ನ್ಯಾಯಲಯಕ್ಕೆ ಅಧಿಕಾರಿಗಳು ಕರೆತಂದು ಬಳಿಕ NIA ತಮ್ಮ ವಶಕ್ಕೆ ಪಡೆದಿದ್ದಾರೆ.
ಭದ್ರತಾ ದೃಷ್ಠಿಯಿಂದ ವಿಚಾರಣೆಗೆ ತೊಂದರೆಯಾಗಬಹುದು ಎಂದು ಸುರಕ್ಷತಾ ದೃಷ್ಟಿಯಿಂದ ಅಗತ್ಯ ರೀತಿಯಲ್ಲಿ ತನಿಖೆ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ವಶಕ್ಕೆ ಪಡೆದ ಅಧಿಕಾರಿಗಳು ಇದೇ ವೇಳೆ, ಭಟ್ಕಳ ಮೂಲದ ಜುಫ್ರಿ ಜವಾಹರ್ ದಾಮುದಿ ಎಂದು ಗುರುತಿಸಿಕೊಂಡಿರುವವನೇ ಅಬು ಹಾಜಿರ್ ಅಲ್ ಬದ್ರಿ ಎನ್ನುವುದನ್ನು ಎನ್‌ಐಎ ಖಚಿತಪಡಿಸಿಕೊಂಡಿದೆ.
ಜಾಲಿಯ ಉಮರ್ ಸ್ಟ್ರೀಟ್ ನಿವಾಸಿ ಜುಫ್ರಿ ಜವಾಹರ್ ದಾಮುದಿ ಬಂಧಿತ ಆರೋಪಿ. ಈತ ಉಗ್ರ ಸಂಘಟನೆಯ ನಿಯತಕಾಲಿಕೆ ‘ವಾಯ್ಸ್ ಆಫ್ ಹಿಂದ್’ ಅನ್ನು ದಕ್ಷಿಣ ಭಾರತದ ಭಾಷೆಗಳಿಗೆ ಭಾಷಾಂತರ ಮಾಡುತ್ತಿದ್ದ ಎನ್ನಲಾಗಿದೆ.
ಈತನ ಹಾಗೂ ಭಟ್ಕಳದ ಸಾಗರ ರಸ್ತೆಯಲ್ಲಿರುವ ಬೇರೊಬ್ಬರ ಮನೆಯಲ್ಲಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದರು. ಎರಡೂ ಕಡೆಗಳಿಂದ ಮೊಬೈಲ್ ಫೋನ್, ಸಿಮ್‌ಕಾರ್ಡ್ಗಳು, ಹಾರ್ಡ್ ಡಿಸ್ಕ್, ಮೆಮೊರಿ ಕಾರ್ಡ್ಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.