ಕುಮಟಾ:ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ತಕ್ಷಣ ಕಂಡು ಹಿಡಿದು ಬಂಧಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಕುಮಟಾ ತಹಸೀಲ್ದಾರರ ಮೂಲಕ ಇಂದು ಮಧ್ಯಾಹ್ನ ೪.೩೦ಕ್ಕೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮನವಿ ಅರ್ಪಿಸಿದೆ. ಸಾಹಿತ್ಯ ಪರಿಷತ್ ಸದಸ್ಯರು, ಸಮಾನ ಮನಸ್ಕ ಸ್ನೇಹಿತರು ಕುಮಟಾ ತಹಸೀಲ್ದಾರರ ಕಚೇರಿ ಆವರಣದಲ್ಲಿ ಸೇರಿ ಮನವಿ ಅರ್ಪಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಕರ್ಕಿಕೋಡಿ (ಜಿಲ್ಲಾಧ್ಯಕ್ಷರು. ಕಸಾ.ಪ. ಉತ್ತರ ಕನ್ನಡ) ಗೌರಿ ಲಂಕೇಶ್ ಮೇಲಿನ ಈ ದಾಳಿ ಅತ್ಯಂತ ಹೇಯ ಕೃತ್ಯ ಇಂತಹ ಘಟನೆ ಮರುಕಳಿಸದಂತೆ ವ್ಯವಸ್ಥೆ ಸರಿಪಡಿಸಬೇಕು. ಮತ್ತು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಡಾ. ಶ್ರೀಧರ ಉಪ್ಪಿನಗಣಪತಿ (ತಾಲೂಕಾಧ್ಯಕ್ಷರು, ಕ.ಸಾ.ಪ. ಕುಮಟಾ),ಕಸಾಪ ಕಾರ್ಯದರ್ಶಿ ಎಂ ಎಂ ನಾಯ್ಕ, ಇನ್ನಿತರರು ಹಾಜರಿದ್ದರು.

RELATED ARTICLES  ಮತ್ಸಮಹಿಳಾ ಸ್ವಾವಲಂಬಿ ಯೋಜನೆಯ ಚೆಕ್ ವಿತರಣೆ