ಕುಮಟಾ- ಸಾಮಾಜಿಕ ಪರಿಶೋಧನೆಯಿಂದ ಗ್ರಾಮೀಣ ಭಾಗದ ಹಲವು ಯೋಜನೆಗಳಲ್ಲಿ ಪಾರದರ್ಶಕತೆ ಉತ್ತರ ದಾಯಿತ್ವ ಸಾಧ್ಯವಾಗಿದೆ ಎಂದರೆ ಅದು ತಪ್ಪಾಗಲಾರದು. ಸಾಮಾಜಿಕ ಪರಿಶೋಧನೆ ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯುವುದರಿಂದ ಇದು ಸಾಧ್ಯವಾಗಿದೆ. ಉದ್ಯೋಗ ಖಾತ್ರಿಯಲ್ಲಿ ನಿಯಮ ಪಾಲಿಸಿ ಅತಿ ಹೆಚ್ಚು ಗ್ರಾಮೀಣ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯ ಎಂದು ಸೋಶಿಯಲ್ ಆಡಿಟ್ ಸಮನ್ವಯಾಧಿಕಾರಿ ಉಮೇಶ ಮುಂಡಳ್ಳಿ ಹೇಳಿದರು. ಅವರು ಶನಿವಾರ ಕುಮಟ ತಾಲೂಕಿನ ದೇವಗಿರಿ ಪಂಚಾಯತ್ ಸಭಾ ಭವನದಲ್ಲಿ ನಡೆದ 2020-21ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕನಿಷ್ಠ ಕೂಲಿಗೂ ಪರದಾಡುವಂತಹ ಅನೇಕ ಬಡ ಕುಟುಂಬ ಪ್ರತಿ ಊರಲ್ಲೂ ಇದ್ದೆ ಇರುವುದರಿಂದ ಅಂತಹ ಬಡಜನರನ್ನು ಯೋಜನೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಅಗತ್ಯತೆ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಂಡಳ್ಳಿಯವರು ತಿಳಿಸಿದರು. ಜೊತೆಗೆ ಯೋಜನೆಯಲ್ಲಿ ಬರಬಹುದಾದ ಎಲ್ಲ ಕಾಮಗಾರಿಗಳ ಪರಿಚಯ ಮತ್ತು ಒದಗಿಸಬೇಕಾದ ದಾಖಲುಗಳ ಬಗ್ಗೆ ಸಭೆಯಲ್ಲಿ ಅವರು ತಿಳಿಸಿ ಹೇಳಿ, ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ದೇವಗಿರಿಯಲ್ಲಿ ನರೇಗಾ ಹಾಗೂ ೧೪ನೇ ಹಣಕಾಸು ಯೋಜನೆ ಉತ್ತಮ ಕಾಮಗಾರಿ ಕೈಗೊಂಡು ಪಾರದರ್ಶಕತೆ ನಡೆದಿರುವ ಬಗ್ಗೆ ಜನಾಭಿಪ್ರಾಯ ವ್ಯಕ್ತವಾಗಿರುವ ಬಗ್ಗೆ ಸಭೆಗೆ ತಿಳಿಸಿದರು.

RELATED ARTICLES  ಕನಸಿನ ಭಾರತ ವಾರ ಪತ್ರಿಕೆ ಕರಾವಳಿ ಕರ್ನಾಟಕ ನೂತನ ಸಂಚಿಕೆಲೋಕಾರ್ಪಣೆಗೊಳಿಸಿದ ಭಟ್ಕಳದ ಮಾಜಿ ಶಾಸಕ ಮಂಕಾಳ ಎಸ್ ವೈದ್ಯ

ಜೊತೆಗೆ ೨೦೧೮/೧೯ ಹಾಗೂ ೨೦೧೯/೨೦ ನೇ ಸಾಲಿನಲ್ಲಿ ೧೪ ನೇ ಹಣಕಾಸು ಯೋಜನೆಯಲ್ಲಿ ನಡೆಸಿದಂತ ಕಾಮಗಾರಿಗಳ ಕುರಿತು ನಡೆಸಿದ ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಗ್ರಾಮ ಸಭೆ ಅಧ್ಯಕ್ಷತೆ ವಹಿಸಿದ್ದ ಅಕ್ಷರ ದಾಸೋಹ ಸ.ನಿರ್ದೇಶಕ ದೇವರಾಯ ನಾಯಕ ಮಾತನಾಡಿ ಸಾಮಾಜಿಕ ಪರಿಶೋಧನೆ ಸಕಾಲದಲ್ಲಿ ನಡೆಯುವುದು ಯೋಜನೆಗೆ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

RELATED ARTICLES  ಮಾಜಿ ಸೈನಿಕನ ಮೇಲೆ ಹಲ್ಲೆ? : ಹೊನ್ನಾವರದಲ್ಲಿ ಪ್ರಕರಣ ದಾಖಲು.

ಅಭಿವೃದ್ಧಿ ಅಧಿಕಾರಿ ವಿನಯ ಕುಮಾರ್ ನಾಯ್ಕ ಎಲ್ಲರನ್ನೂ ಸ್ವಾಗತಿಸಿ ಪ್ರಸ್ತುತ ಅವದಿಯಲ್ಲಿ ಮಾಡಲಾದ ನರೇಗಾ ಹಾಗೂ ಹಣಕಾಸು ಯೋಜನೆಯ ಕಾಮಗಾರಿಗಳನ್ನು ಖರ್ಚು ವಿವರಗಳನ್ನು ಸಭೆಯ ಗಮನಕ್ಕೆ ತಂದರು ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ರತ್ನಾ ಹರಿಕಾಂತ ಉಪಸ್ಥಿತರಿದ್ದರು.

ಸಭೆಯಲ್ಲಿ ಗ್ರಾಪಂ ನೂತನ ಸದಸ್ಯರುಗಳು ಸ್ವ ಸಹಾಯ ಸಂಘದ ಮಹಿಳೆಯರು ಅಂಗವಾಡಿ ಮತ್ತುಆಶಾ ಕಾರ್ಯಕರ್ತೆಯರು,ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಗ್ರಾಮಸ್ಥರು ಹಾಜರಿದ್ದರು.