ಕುಮಟಾ : ಕೋವಿಡ್ 19 ಮೂರನೇ ಅಲೆಯನ್ನು ತಡೆಯುವ ಮುಂಜಾಗ್ರತಾ ಕ್ರಮವಾಗಿ ಸರಕಾರದ ಆದೇಶದಂತೆ ಧಾರೇಶ್ವರದ ಶ್ರೀ ಧಾರಾನಾಥ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ.

ಶ್ರೀ ದೇವರಲ್ಲಿ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಉಳಿದ ಸೇವೆಗೆ ಅವಕಾಶವಿರುವುದಿಲ್ಲ. ಪ್ರತಿವರ್ಷ ಶ್ರಾವಣದಲ್ಲಿ ಭಕ್ತಾದಿಗಳಿಗೆ ಸ್ವತಃ ಗರ್ಭಗುಡಿಗೆ ತೆರಳಿ ದೇವರಲ್ಲಿ ಅಭಿಷೇಕ ಪೂಜಾದಿಗಳನ್ನು ನಡೆಸಲು ಅವಕಾಶವಿರುತ್ತಿತ್ತು. ಆದರೆ ಸರ್ಕಾರದ ಮುಂದಿನ ಆದೇಶದ ವರೆಗೂ ದರ್ಶನದ ಹೊರತಾಗಿ ಉಳಿದೆಲ್ಲ ಸೇವೆಗಳನ್ನು ನಿರ್ಬಂಧಿಸಲಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಭಕ್ತಾದಿಗಳು ಸಹಕರಿಸುವಂತೆ ಕೋರಿದ್ದಾರೆ.

RELATED ARTICLES  ನನ್ನ ಪ್ರಯತ್ನವನ್ನು ಈಗಿನ ಸರ್ಕಾರದ ಪ್ರತಿನಿಧಿಗಳು ಸ್ಮರಿಸಲಿ : ಶಾರದಾ ಶೆಟ್ಟಿ.

ಕರೋನಾ ಎರಡನೆಯ ಅಲೆ ಕಳೆದು ಇನ್ನೇನು ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಮೂರನೇ ಅಲೆಯ ಸುದ್ದಿ ಹಬ್ಬುತ್ತಿದ್ದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಾರ್ಗಸೂಚಿ ಪ್ರಕಟಿಸಿದ್ದು ಸಾರ್ವಜನಿಕರಿಗೆ ಯಾವುದೇ ರೀತಿಯ ಅವಕಾಶ ಇರುವುದಿಲ್ಲ. ಇದರಿಂದ ಶ್ರಾವಣ ಮಾಸದಲ್ಲಿ ನಡೆಯುವ ಕೈಂಕರ್ಯಗಳಲ್ಲಿ ಸಾರ್ವಜನಿಕರು ಭಾಗವಹಿಸಲು ಕಷ್ಟಸಾಧ್ಯವಾಗಲಿದೆ.

RELATED ARTICLES  ಉತ್ತರಕನ್ನಡದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯದವರೇ ಹೆಚ್ಚು?