ಕಾರವಾರ : ಜಿಲ್ಲೆಯಲ್ಲಿ ಆ.8 ಭಾನುವಾರ ಒಟ್ಟೂ 1850 ವ್ಯಾಕ್ಸಿನ್ ಲಭ್ಯವಿದ್ದು, ಅದರಲ್ಲಿ 770 ಕೋವಿಶೀಲ್ಡ್, 1080 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಎಲ್ಲಿ ಎಷ್ಟು ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ?

ಹೊನ್ನಾವರದಲ್ಲಿ 170, ಜೋಯ್ಡಾದಲ್ಲಿ 130, ಮುಂಡಗೋಡದಲ್ಲಿ 160, ಕುಮಟಾದಲ್ಲಿ 140, ಶಿರಸಿ 40, ಯಲ್ಲಾಪುರದಲ್ಲಿ 100, ಜಿಲ್ಲಾಸ್ಪತ್ರೆಯಲ್ಲಿ 30 ವ್ಯಾಕ್ಸಿನ್ ಲಭ್ಯವಿದೆ.

ಎಷ್ಟು ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯ?
ಹೊನ್ನಾವರದಲ್ಲಿ 10, ಕಾರವಾರದಲ್ಲಿ 160, ಶಿರಸಿಯಲ್ಲಿ 490, ಜಿಲ್ಲಾಸ್ಪತ್ರೆಯಲ್ಲಿ 420 ಡೋಸ್ ಲಸಿಕೆ ಲಭ್ಯವಿದೆ.

RELATED ARTICLES  ಜಿ 20: ಪ್ರಧಾನಿ ಮೋದಿ ಸೌದಿ ರಾಜ ಪ್ರಭು ಭೇಟಿ: ಟ್ರಂಪ್, ಅಬೆ,ಕ್ಸಿ ಜಿನ್ಪಿಂಗ್ ಜೊತೆ ತ್ರಿಪಕ್ಷೀಯ ಮಾತುಕತೆ ನಡೆಸಲು ಸಾಧ್ಯತೆ.

ಹೊನ್ನಾವರದಲ್ಲಿ ಎಲ್ಲಿ?

ಹೊನ್ನಾವರ: ನಾಳೆ ಇಡಗುಂಜಿ ದೇವಸ್ಥಾನದ ಹತ್ತಿರ 170 ಕೊವೀಸಿಲ್ಡ್ ನೀಡಲಾಗುತ್ತದೆ, 50-50 ಮಾದರಿಯಲ್ಲಿ ಪಸ್ಟ್ ಡೋಸ್-ಸೆಕೆಂಡ್ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅಂಕೋಲಾದಲ್ಲಿ ಟೆಸ್ಟ್

ಅಂಕೋಲಾ: ಕೊವಿಡ್ ಮೂರನೇ ಅಲೆಯ ಆತಂಕ ಇರುವ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಪೊಲೀಸರ ಸಹಕಾರದೊಂದಿಗೆ ಪಟ್ಟಣದಲ್ಲಿ ಸಂಚರಿಸುತ್ತಿದ್ದ ಜನರನ್ನು ಟೆಸ್ಟ್ ಮಾಡಿಸಿ ಬಿಡುತ್ತಿದ್ದಾರೆ. ಪಿಎಸ್‌ಐ ಪ್ರವೀಣ ಕುಮಾರ ಆರ್. ಪುರಸಭೆ ಮುಖ್ಯಾಧಿಕಾರಿ ಶ್ರುತಿ ಗಾಯಕವಾಡ, ಸಂಘಟನಾ ಅಧಿಕಾರಿ ಡಿ.ಎಲ್.ರಾಠೋಡ, ಇಂಜಿನೀಯರ್ ಭಾಸ್ಕರ ಗೌಡ, ಪೊಲೀಸ್ ಸಿಬ್ಬಂದಿಗಳು ಕಾರ್ಯದಲ್ಲಿ ಪಾಲ್ಗೊಂಡಿದ್ದರು.

RELATED ARTICLES  ಸಿಎಂ ಸಿದ್ದರಾಮಯ್ಯರಿಗೆ ಕರಾಟೆ ಪಟ್ಟು ತೋರಿಸಿದ್ದ ಮೇಯರ್ ಗೆ ಕರಾಟೆಯಲ್ಲಿ ಚಿನ್ನದ ಪದಕ

ಪಾಸಿಟಿವಿಟಿ ರೇಟ್..!

ಕಾರವಾರ: ಕೊರೊನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶನಿವಾರ ಶೇ.1.13 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಅದರಂತೆ ಶುಕ್ರವಾರ ಜಿಲ್ಲೆಯಲ್ಲಿ ಶೇ.1.23 ಹಾಗೂ ಗುರುವಾರ 1.19ರಷ್ಟು ಪಾಸಿಟಿವಿಟಿ ಪ್ರಮಾಣ ದಾಖಲಾಗಿತ್ತು.