ಅಪರಿಚಿತ ಶವ ಪತ್ತೆ
ಹೊನ್ನಾವರ: ಪಟ್ಟಣದ ಶರಾವತಿ ವೃತ್ತದ ಸಮೀಪ ಸಾಯಿ ಕಾಂಪ್ಲೆಕ್ಸ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸ್ಥಳೀಯರು ಬಹು ಸಮಯದಿಂದ ವ್ಯಕ್ತಿಮಲಗಿದ್ದಂತೆ ಕಂಡುಬಂದ ಕಾರಣ ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕಾಮತ ಗಮನಕ್ಕೆ ತಂದಿದ್ದರು. ಕೂಡಲೆ ಪರಿಶೀಲನೆ ನಡೆಸಿ 108 ಕರೆ ಮಾಡಿದಾಗ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಪೊಲೀಸ್ ಇಲಾಖೆಗೆ ಬಳಿಕ ಮಾಹಿತಿ ನೀಡಲಾಗಿದೆ. ಶವವನ್ನು ತಾಲೂಕು ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೋನಾ ನಿಯಮ ಮೀರಿದ ಪ್ರಕರಣ
ಕಾರವಾರ: ಕಂಟೋನೈಂಟ್ ಝೂನ್ ವಲಯದಲ್ಲಿ ನಿಯಮ ಉಲ್ಲಂಘಿಸಿದ ಕೋವಿಡ್ ಸೋಂಕಿತರೊಬ್ಬರ ಮೇಲೆ ನಗರಸಭೆಯಿಂದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ವಾರ್ಡ್ ನಂ.22 ದಳವಿವಾಡಾದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆತ ಮುಲತಃ ಗದಗಿನವರಾಗಿದ್ದು ನಗರಸಭೆ ಸಿಬ್ಬಂದಿಗಳು ಮನೆಯಿಂದ ಹೊರ ಬರದಂತೆ ಸೂಚಿಸಿದ್ದರು. ಆದರೂ ಸಹ ನಿಯಮ ಉಲ್ಲಂಘಿಸಿದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಉಗ್ರರ ಜೊತೆಗೆ ಸಂಪರ್ಕದಲ್ಲಿದ್ದ ಆರೋಪಿ ಬಗ್ಗೆ ಹೆಬ್ಬಾರ್ ಮಾತು.
ಕಾರವಾರ: ಭಟ್ಕಳದಲ್ಲಿ ಐಎಸ್‌ಐಎಸ್ ಸಂಪರ್ಕದಲ್ಲಿದ್ದ ಓರ್ವನ ಬಂಧನ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಶಿವರಾಮ ಹೆಬ್ಬಾರ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲವೂ ದೆಹಲಿಯಿಂದ ನಡೆದಿದೆ. ವಿವಿಧ ಹಂತದಲ್ಲಿ ಪರಿಶೀಲನೆ ಕೈಗೊಂಡು ಬಂಧಿಸಲಾಗಿದೆ. ಹೆಚ್ಚಿನ ತನಿಖೆಗೆ ದೆಹಲಿಗೆ ಕರೆದೊಯ್ದಿದ್ದಾರೆ.
ತನಿಖೆ ಇನ್ನೂ ಆರಂಭದಲ್ಲಿದ್ದು, ದೆಹಲಿಯಲ್ಲಿ ಮತ್ತಷ್ಟು ವಿಚಾರಣೆ ನಡೆಯಲಿದೆ. ಈ ಪ್ರಕರಣಗಳಲ್ಲಿ ಭಟ್ಕಳವನ್ನೇ ಹೆಚ್ಚು ನಾನು ಒತ್ತಿ ಹೇಳುವುದಿಲ್ಲ. ಭಯೋತ್ಪಾದನೆ ಮತ್ತು ದೇಶದ್ರೋಹಿ ಕಾರ್ಯ ಯಾರಿದಂಲೇ ಆಗಲಿ ಯಾವುದೇ ಧರ್ಮದಿಂದಾಗಲಿ ಅದನ್ನು ನಿರ್ಲಕ್ಷಿಸುವಂಥದಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದರು.