ಭಟ್ಕಳ: ಕಾರಿನ ಬ್ಯಾಟರಿ ಶಾರ್ಟ್ ಸರ್ಕಿಟ್ ನಿಂದ ತಾಲೂಕಿನ ಬೈಲೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಕಾರಿನ ಚಾಲಕ ಕಾರಿನಿಂದ ಇಳಿದು ಬಚಾವ್ ಆಗಿದ್ದು, ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಿನ್ನೆ ನಡೆದಿದೆ.
ಭಟ್ಕಳದಿಂದ ಹೊನ್ನಾವರಕ್ಕೆ ತೆರಳುವಾಗ ಕಾರಿನ ಮುಂಬಾಗದಲ್ಲಿರುವ ಬ್ಯಾಟರಿ ಶಾರ್ಟ್ ಸರ್ಕಿಟ್ ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಎಲ್.ಪಿ.ಜಿ ಅಳವಡಿಸಿದ ಕಾರು ಇದಾಗಿದ್ದು, ಕಾರಿನ ಮುಂಬಾಗ ಬೆಂಕಿ ಕಾಣಿಸಿಕೊಳ್ಳುತ್ತಿದಂತೆ ತಕ್ಷಣಕ್ಕೆ ಚಾಲಕ ಕಾರಿನಿಂದ ಇಳಿದು ಬಚಾವ್ ಆಗಿದ್ದಾರೆ.
ಸಕಾಲಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರಿಂದ ಯಾವುದೇ ಸ್ಪೋಟ ಸಂಭವಿಲ್ಲ. ಹೊನ್ನಾವರ ತಾಲೂಕಿನ ಸಂತೋಷ ಜನಾರ್ಧನ ಆಚಾರಿ ಎನ್ನುವವರಿಗೆ ಸೇರಿದ ಕಾರು ಇದು ಎಂಬ ಮಾಹಿತಿ ಲಭಿಸಿದೆ.
ವಿಡಿಯೋ..