ಸಂತ್ರಸ್ತರಿಗೆ ನೆರವು ನೀಡಿಕೆಯ ಮಾಹಿತಿ ನೀಡಿದ ಶಾಸಕರು.

ಕುಮಟಾ: ತಾಲೂಕಿನಲ್ಲಿ ಮಳೆಹಾನಿ, ನೆರೆ ಪರಿಹಾರಕ್ಕಾಗಿ ಸಂತ್ರಸ್ತರು ಅರ್ಜಿ ಹಿಡಿದು ಕೈಚಾಚಿ ಕಾಯಬೇಕಾದ ಪರಿಸ್ಥಿತಿ ಇಲ್ಲ. ಕೆಲ ದಿನಗಳ ಹಿಂದೆ ಭಾರೀ ಮಳೆ ಹಾಗೂ ನೆರೆಹಾವಳಿಯಿಂದ ಮನೆಗಳಿಗೆ ನೀರು ನುಗ್ಗಿರುವುದು ಹಾಗೂ ಮನೆ ಹಾನಿಗೆ ಸಂಬಂಧಿಸಿ ಒಟ್ಟೂ 1, 48, 20,000 ರೂ. ಪರಿಹಾರವನ್ನು ಸಂತ್ರಸ್ತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿ, ಜುಲೈ 23 ರಿಂದ ಬಿದ್ದ ಭಾರೀ ಮಳೆಗೆ 3314 ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಹಾನಿಯಾಗಿದೆ. ಈಗಾಗಲೇ ಮನೆಗೆ ನೀರು ನುಗ್ಗಿರುವ 3042 ಪ್ರಕರಣಗಳಿಗೆ 1,15, 59, 600 ರೂ ನಿಗದಿತ ಪರಿಹಾರ ಜಮಾ ಮಾಡಲಾಗಿದೆ. ಉಳಿದ 272 ಪ್ರಕರಣಗಳಿಗೆ ಒಂದೆರಡು ದಿನದಲ್ಲಿ ಪರಿಹಾರ ಜಮಾ ಆಗಲಿದೆ. ಮನೆ ಹಾನಿ ಪ್ರಕರಣದಲ್ಲಿ 19 ಪೂರ್ತಿ, 14 ತೀವ್ರ, 60 ಭಾಗಶಃ ಮನೆ ಹಾನಿಯಾದ ಬಗ್ಗೆ ವರದಿ ತಯಾರಿಸಿ ಪೂರ್ತಿ, ತೀವ್ರ ಮತ್ತು ಭಾಗಶಃ ಹಾನಿಗೊಳಗಾದ ಒಟ್ಟೂ 57 ಮನೆಗಳಿಗೆ 32, 63,100 ರೂ. ಪರಿಹಾರ ಜಮಾ ಮಾಡಲಾಗಿದೆ. ಬಾಕಿ ಇರುವ 36 ಪ್ರಕರಣಗಳಿಗೆ ಒಂದೆರಡು ದಿನದಲ್ಲಿ ಪರಿಹಾರ
ಜಮಾ ಮಾಡಲಾಗುವುದು ಎಂದು ತಿಳಿಸಿದರು.

RELATED ARTICLES  ಮುಖ್ಯಮಂತ್ರಿಯವರಿಗೆ ಮನವಿ ನೀಡಲು ಸಿಗಲಿಲ್ಲ ಅವಕಾಶ, ನಡೆಯಿತು ಪ್ರತಿಭಟನೆ.

ತಾ.ಪಂ ಸಭೆ : ಪ್ರಮುಖ ವಿಚಾರ ಚರ್ಚೆ

ಕುಮಟಾ: ಪಟ್ಟಣದ ತಾಪಂ ಸಭಾಭವನದಲ್ಲಿ ತಾ.ಪಂ ಆಡಳಿತಾಧಿಕಾರಿ ಈಶ್ವರ ನಾಯ್ಕ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಮಾತನಾಡಿ, ನೆರೆ ಹಾವಳಿಯಿಂದ ಹಾನಿಗೊಳಗಾದ ಶಾಲೆಯ ಕಟ್ಟಡಗಳನ್ನು ಪರಿಶೀಲಿಸಿ, ವರದಿ ಸಿದ್ಧಪಡಿಸಿ, ಸಂಬಂಧಿತ ಇಲಾಖೆಗೆ ಕಳುಹಿಸಲಾಗಿದೆ. ಸರ್ಕಾರದಿಂದ ಶೇ.30ರಷ್ಟು ಮಾತ್ರ ಪಠ್ಯ-ಪುಸ್ತಕಗಳ ಪೂರೈಕೆಯಾಗಿದ್ದು, ಆದರೆ ಇದುವರೆಗೂ ವಿತರಣೆ ಮಾಡಿಲ್ಲ. ಕೊವಿಡ್ ಸಮಯದಲ್ಲಿಯೂ ಪ್ರಸಕ್ತ ಸಾಲಿನ ಎಸ್.ಎಸ್.ಎಲ್ಸಿ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಇದಕ್ಕೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಕಾರಣವಾಗಿದೆ. ಮೂವರು ವಿದ್ಯಾರ್ಥಿಗಳು ಮಾತ್ರ ಗೈರಾಗಿದ್ದು, ಈ ವರ್ಷದ ಶಾಲೆಯ ಹಾಜರಾತಿಯಲ್ಲಿ ರಾಜ್ಯದಲ್ಲಿ ಕುಮಟಾ ತಾಲೂಕು ಪ್ರಥಮ ಸ್ಥಾನ ಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.

RELATED ARTICLES  ಸಹಯಾನದಲ್ಲಿ ಪ್ರಸಾಧನ ಮತ್ತು ವಸ್ತ್ರವಿನ್ಯಾಸ ಶಿಬಿರ