ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಗಟೆ ಬೈಲನ ವೆಂಕಟಪುರ ನದಿಯಲ್ಲಿ ಯುವಕನೋರ್ವ ನೀರುಪಾಲಾದ ಘಟನೆ ನಡೆದ ಬಗ್ಗೆ ವರದಿಯಾಗಿದೆ.

ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನೀರಿಗೆ ಇಳಿದ ಯುವಕ ಜಯಂತ ರಾಮಗೊಂಡ (19ವರ್ಷ) ನೀರು ಪಾಲಾಗಿದ್ದಾನೆ ಎನ್ನಲಾಗಿದೆ. ಈತ ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನೀರಿಗೆ ಇಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ನಾಪತ್ತೆಯಾಗಿದ್ದ, ಸುದ್ದಿ ತಿಳಿದು ಸ್ಥಳಕ್ಕೆ ನೂರಾರು ಜನರು ಆಗಮಿಸಿ ನದಿ ದಂಡೆಯಲ್ಲಿ ಸೇರಿದ್ದರು.

RELATED ARTICLES  ಸೂಕ್ತ ದಾಖಲೆ ನೀಡದ ಹಿನ್ನೆಲೆ : ಹೊನ್ನಾವರದಲ್ಲಿ ಹಲವು ಅಂಗಡಿಗಳು ಸೀಜ್

ಸ್ಥಳೀಯ ಯುವಕರು ಕೆಲ ಸಮಯ ಹುಡುಕಾಟ ನಡೆಸಿ ನದಿಯಲ್ಲಿ ಮುಳುಗಿ ಮೃತಪಟ್ಟ ಯುವಕನ ಶವನ್ನು ಮೇಲಕ್ಕೆ ಎತ್ತಿದ್ದು, ಯುವಕನ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

RELATED ARTICLES  ಕುಮಟಾ : ಮಾನೀರ್ ಸಮೀಪ ಭೀಕರ ಅಪಘಾತ.

ಯುವಕನ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ, ಸ್ಥಳದಲ್ಲಿ ನೂರಾರು ಜನ ಸೇರಿದ್ದರು. ಸ್ಥಳಕ್ಕೆ ಗ್ರಾಮೀಣ ಠಾಣೆ ಪಿ.ಎಸ್.ಐ ಭರತ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿದ್ದಾರೆ.