ಯಲ್ಲಾಪುರ: ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೇನೋ ಎಂಬಂತೆ ಭಾಸವಾಗುತ್ತಿದ್ದ, ಸಕಾರಣ ಈವರೆಗೂ ತಿಳಿಯದು ಬರದಿದ್ದರೂ, ನೇಣು ಹಾಕಿದ ಸ್ಥಿತಿಯಲ್ಲಿ ಇರುವ ವ್ಯಕ್ತಿಯ ಶವ ಇರುವುದು ತಡವಾಗಿ ಬೆಳಕಿಗೆ ಬಂದಿದೆ. ಶವ ಈಗಾಗಲೇ ಕೊಳೆತಿರುವುದು ವರದಿಯಾಗಿದೆ.
ತಾಲೂಕಿನ ಕಣ್ಣಿಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷ್ಣಗದ್ದೆ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತಪಟ್ಟು ಬಹಳ ದಿನಗಳೇ ಕಳೆದಿರುವುದರಿಂದ ಕೊಳೆತ ಸ್ಥಿತಿಯಲ್ಲಿದ್ದು ಗುರುತು ಇನ್ನು ಪತ್ತೆಯಾಗಿಲ್ಲ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ. ವ್ಯಕ್ತಿಯ ಶವ ಕೊಳ್ಳುತ್ತಿದ್ದು ದುರ್ನಾತದಿಂದ ಕೂಡಿತ್ತು ಕೆಲಸದವರು ಹಾಗೂ ಇನ್ನಿತರ ಅಧಿಕಾರಿಗಳ ಸಹಾಯದಿಂದ ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ತನಿಖೆ ನಂತರದಲ್ಲಿ ಪೂರ್ಣ ವಿವರಗಳು ತಿಳಿದುಬರಬೇಕಿದೆ ಎಂದು ಸ್ಥಳೀಯ ಮಾಹಿತಿ ಲಭ್ಯವಾಗಿದೆ.