ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಸೋಮವಾರ 520 ಡೋಸ್ ಕೋವೀಶೀಲ್ಡ್ ಮತ್ತು 1000 ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂಡಗೋಡಿನಲ್ಲಿ 70 ಡೋಸ್, ಕುಮಟಾದಲ್ಲಿ 140 ಡೋಸ್, ಹೊನ್ನಾವರದಲ್ಲಿ 40, ಡೋಸ್, ಜೋಯಿಡಾದಲ್ಲಿ 130 ಡೋಸ್, ಶಿರಸಿ 40 ಡೋಸ್, ಯಲ್ಲಾಪುರದಲ್ಲಿ 100 ಡೋಸ್ ಲಭ್ಯವಿದೆ.
ಭಟ್ಕಳ, ಹಳಿಯಾಳ, ಕಾರವಾರ, ಅಂಕೋಲಾ , ಸಿದ್ದಾಪುರ, ದಾಂಡೇಲಿಗಳಲ್ಲಿ ಕೋವೀಶೀಲ್ಡ್ ಲಸಿಕೆ ಲಭ್ಯವಿಲ್ಲ.
ಉಳಿದಂತೆ ಒಟ್ಟು 1000 ಡೋಸ್ ಕೋವ್ಯಾಕ್ಸಿನ್ ಲಸಿಕೆಯಲ್ಲಿ ಹೊನ್ನಾವರದಲ್ಲಿ 10 ಡೋಸ್, ಜಿಲ್ಲಾಸ್ಪತ್ರೆಯಲ್ಲಿ 320 ಡೋಸ್,ಕಾರವಾರದಲ್ಲಿ 160 ಡೋಸ್, ಶಿರಸಿಯಲ್ಲಿ 490 ಡೋಸ್, ದಾಂಡೇಲಿಯಲ್ಲಿ 20 ಡೋಸ್ ಲಸಿಕೆ ಇದೆ.
ಯಲ್ಲಾಪುರ: ತಾಲೂಕಿನಲ್ಲಿ ಸೋಮವಾರ ಒಟ್ಟೂ 100 ಕೊರೊನಾ ವ್ಯಾಕ್ಸಿನ್‌ಗಳು ಲಭ್ಯವಿದ್ದು ಫಲಾನುಭವಿಗಳು ಪಡೆಯಬಹುದಾಗಿದೆ. ತಾಲೂಕಾ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಅನ್ವಯ 100 ಕೋವಿಶೀಲ್ಸ್ ಲಸಿಕೆಗಳು ಯಲ್ಲಾಪುರ ತಾಲೂಕಿನಲ್ಲಿ ಸೋಮವಾರ ಲಭ್ಯವಿದ್ದು ಕೋವ್ಯಾಕ್ಸಿನ್ ಲಸಿಕೆಗಳ ಲಭ್ಯತೆ ಇಲ್ಲ. ಈಗಾಗಲೇ ಮೊದಲ ಡೋಸ್ ಪಡೆದು 84 ದಿನಗಳು ಪೂರೈಸಿರುವವರು ಎರಡನೇ ಡೋಸ್ ಪಡೆಯಲು ಅವಕಾಶ ನೀಡಲಾಗಿದೆ. ತಮ್ಮವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆಗಳನ್ನು ಪಡೆಯಬಹುದಾಗಿದೆ.
ಸಿದ್ದಾಪುರ: ತಾಲೂಕಿನಲ್ಲಿ ಆ. 9 ಸೋಮವಾರದಂದು ಲಸಿಕಾಕರಣ ಪ್ರಕ್ರಿಯೆ ಇರುವುದಿಲ್ಲ. ಲಸಿಕೆ ಲಭ್ಯವಿಲ್ಲದಿರುವುದರಿಂದ ಲಸಿಕಾಕರಣವನ್ನು ಸ್ಥಗಿತ ಗೊಳಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು, ಲಸಿಕೆ ಲಭ್ಯವಾದ ಕೂಡಲೇ ತಿಳಿಸಲಾಗುವುದು ಎಂದು ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಬರುವ ಮುನ್ನ ಆಯಾ ತಾಲೂಕಾ ಆರೋಗ್ಯಾಧಿಕಾರಿ ಅಥವಾ ಸ್ಥಳೀಯ ಆಶಾ ಕಾರ್ಯಕರ್ತರಲ್ಲಿ ವಿಚಾರಿಸಿಕೊಂಡು ಬರುವುದು ಉತ್ತಮ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.