ಕಾರವಾರ : ಸಮುದ್ರದ ನೀರಿನಲ್ಲಿ ಮೋಜು ಮಸ್ತಿ ಮಾಡಲುಹೋಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಇತ್ತೀಚಿಗೆ ಏರುತ್ತಿದ್ದು, ಇಂದು ಮತ್ತೊಂದು ಇಂತಹುದೇ ಪ್ರಕರಣ ವರದಿಯಾಗಿದೆ.

ಕುಮಟಾ ತಾಲೂಕಿನ ಗೋಕರ್ಣದ ಸಮುದ್ರದಲ್ಲಿ ಈಜಲು ಹೋದ ಯುವಕ ನೀರು ಪಾಲಾದ ಘಟನೆ ನಡೆದಿದೆ. ಬೆಂಗಳೂರು ನಗರದ ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ ನೀರಿನಲ್ಲಿ ಮುಳಗಿ ನಾಪತ್ತೆಯಾದ ಯುವಕ ಎನ್ನಲಾಗಿದೆ.

RELATED ARTICLES  ನಾಳೆ ಕುಮಟಾ ಲಾಯನ್ಸ್ ಪದಾಧಿಕಾರಿಗಳ ಪದಗ್ರಹಣ

ಬೆಂಗಳೂರಿನಿಂದ ಗೋಕರ್ಣಕ್ಕೆ 8 ಜನ ಸ್ನೇಹಿತರು ಇಂದು ಮುಂಜಾನೆ ಪ್ರವಾಸಕ್ಕೆ ಬಂದಿದ್ದರು. ಸ್ಥಳೀಯ ಜನರ ಎಚ್ಚರಿಕೆ ನಡುವೆಯೂ ಎಂಟು ಜನ ಈಜಲು ಸಮುದ್ರಕ್ಕೆ ಇಳಿದಿದ್ದರು. ಅಲೆಯ ಅಬ್ಬರಕ್ಕೆ ಇಬ್ಬರು ಕೊಚ್ಚಿಹೋಗಿದ್ದರು. ಈ ವೇಳೆ ಓರ್ವನನ್ನು ಲೈಫ್ ಗಾರ್ಡ ಹಾಗೂ ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿದೆ.

RELATED ARTICLES  ಕಾರವಾರ ಸಾಯಿ ಮಂದಿರ ಸುವರ್ಣ ಮಹೋತ್ಸವಕ್ಕೆ ಕ್ಷಣಗಣನೆ

ಅರುಣ ಎಂಬುವವರನ್ನು ಹೊರತುಪಡಿಸಿ ಸಮುದ್ರಕ್ಕೆ ಇಳಿದಿದ್ದ ಉಳಿದವರು ಈಜಿ ದಡ ಸೇರಿದ್ದಾರೆ. ಆದರೇ ಅಲೆಗಳ ಅಬ್ಬರಕ್ಕೆ ಅರುಣ್ ತೇಲಿ ಹೋಗಿದ್ದಾನೆ.ಸಮುದ್ರ ಪಾಲಾದ ಈತನ ಪತ್ತೆಗಾಗಿ ಪೊಲೀಸರು ಹಾಗೂ ಲೈಫ್ ಗಾರ್ಡ ಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.