ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಅತ್ಯಂತ ಕಡಿಮೆ‌ ಪ್ರಮಾಣದಲ್ಲಿ ಲಸಿಕೆ ಲಭ್ಯವಿದೆ.‌‌ ಜಿಲ್ಲೆಯಾದ್ಯಂತ  ಒಟ್ಟು 720 ಕೋವಿಡ್ ಲಸಿಕೆ ಲಭ್ಯವಿದೆ. ಇವುಗಳಲ್ಲಿ 130 ಡೋಸ್ ಕೋವಿಶೀಲ್ಡ್ ಹಾಗು 590 ಕೋವ್ಯಾಕ್ಸಿನ್ ಎಂಬ ಮಾಹಿತಿ ಲಭ್ಯವಾಗಿದೆ.

ಯಾವ ತಾಲೂಕಿನಲ್ಲಿ , ಎಲ್ಲೆಲ್ಲಿ ಎಷ್ಟು ಡೋಸ್ ?

ಜೋಯ್ಡಾದಲ್ಲಿ 30, ಶಿರಸಿಯಲ್ಲಿ 10, ಹೊನ್ನಾವರದಲ್ಲಿ 40, ಯಲ್ಲಾಪುರದಲ್ಲಿ 20, ಜಿಲ್ಲಾಸ್ಪತ್ರೆಯಲ್ಲಿ 30 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಅಲ್ಲದೆ, ಶಿರಸಿಯಲ್ಲಿ 280, ಕಾರವಾರದಲ್ಲಿ 110 ಡೋಸ್, ಜಿಲ್ಲಾಸ್ಪತ್ರೆಯಲ್ಲಿ 190 ಡೋಸ್ ಕೋವಾಕ್ಸಿನ್ ಲಭ್ಯವಿದೆ.

RELATED ARTICLES  ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟೀಸ್.

ಲಸಿಕೆ ಲಭ್ಯತೆ ತುಂಬಾ ಕಡಿಮೆ ಇರುವುದರಿಂದ ನಾಳೆ ಹಲವು ತಾಲೂಕಿನಲ್ಲಿ ವ್ಯಾಕ್ಸಿನೇಷನ್ ಇರುವುದಿಲ್ಲ. ಹೊನ್ನಾವರ, ಶಿರಸಿ, ಯಲ್ಲಾಪುರ, ಸಿದ್ದಾಪುರ, ಅಂಕೋಲಾದಲ್ಲಿ ವ್ಯಾಕ್ಸಿನೇಷನ್ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದಿನ ಕೋವಿಡ್ ಪ್ರಕರಣ

ಜಿಲ್ಲೆಯಲ್ಲಿ ಇಂದು 29 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರ 2, ಅಂಕೋಲಾ 5, ಕುಮಟಾ 7, ಹೊನ್ನಾವರ 4, ಭಟ್ಕಳ 5, ಶಿರಸಿ 3, ಸಿದ್ದಾಪುರ 1, ಮತ್ತು ಮುಂಡಗೋಡಿನಲ್ಲಿ 2 ಕೇಸ್ ಕಾಣಿಸಿಕೊಂಡಿದೆ.

RELATED ARTICLES  ಪ್ರವಾಸದ ಬಸ್ ಅಪಘಾತ..!

ಇದೇ ವೇಳೆ ಜಿಲ್ಲೆಯಾದ್ಯಂತ ಇಂದು 64 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಂಕೋಲಾ 32, ಕಾರವಾರ 5, ಕುಮಟಾ 8., ಹೊನ್ನಾವರ 13, ಭಟ್ಕಳ 4, ಹಳಿಯಾಳ ಮತ್ತು ಜೋಯ್ಡಾದಲ್ಲಿ ತಲಾ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಕುಮಟಾ ಮತ್ತು ಶಿರಸಿಯಲ್ಲಿ ಒಂದು ಸಾವಾಗಿದೆ.