ಶಿರಸಿ: ಕಾಡುಪ್ರಾಣಿ ಬೇಟೆಗೆ ಹೊರಟಿದ್ದ ನಾಲ್ವರನ್ನು ಶಿರಸಿ ಮಾರುಕಟ್ಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಸಿದ ಘಟನೆ ಶಿರಸಿ ನಗರದ ಕರೆಗುಂಡಿ ರಸ್ತೆ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ಲೈಸೆನ್ಸ್ ಇಲ್ಲದವನ ಕೈಗೆ ಬಂದೂಕು ನೀಡಿ ಕಾಡು ಪ್ರಾಣಿ ಬೇಟೆ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಆರೋಪಿತರಾದ ಹಿಪ್ಪೂರ್ ರೆಹಮಾನ್ ಮೊಹಮ್ಮದ್ ಹಲಿ ಕಸ್ತೂರಬಾ ನಗರ ಶಿರಸಿ, ಅಬ್ದುಲ್ ರಜಾಕ್ ಅಬ್ದುಲ್ ವಾಹೀದ್ ನೆಹರುನಗರ ಶಿರಸಿ, ಇನಾಯತ್ ಖಾನ್ ಉಡಾನ್ ಖಾನ್ ನೆಹರುನಗರ ಶಿರಸಿ ಹಾಗೂ ಮೋಹಮ್ಮದ್ ಇಸ್ಲಾಯಿಲ್ ಮೊಹಮ್ಮದ್ ಉಸ್ಥಾನ್ ಸಾಬ್ ಹೇರೂರು ಎನ್ನುವವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES  ಶ್ರೀ ಗುರು ಸುಧೀಂದ್ರ ಪ್ರಥಮ ದರ್ಜೆ ಕಾಲೇಜು ಹಾಗೂ ಫಿಡಿಲಿಟಿ ನ್ಯಾಶನಲ್ ಫೈನಾನ್ಶಿಯಲ್ ಕಂಪೆನಿಯ ಪರಸ್ಪರ ಒಡಂಬಡಿಕೆ ಅನುಷ್ಟಾನ ಕಾರ್ಯಕ್ರಮ

ಆರೋಪಿಗಳು ಕಾಡುಪ್ರಾಣಿಯ ಬೇಟೆಗಾಗಿ ಬಂದೂಕನ್ನು ಪಡೆದು ಸಂಚರಿಸುತ್ತಿರುವಾಗ ದಾಳಿ ನಡೆಸಿದ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಬಂದೂಕು ಹಾಗೂ ಮಾರುತಿ 800 ಕಾರನ್ನು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆಯ ನಂತದ ಹೆಚ್ಚಿನ ಮಾಹಿತಿ ಬರಬೇಕಿದೆ.

RELATED ARTICLES  ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ದಿನಕರ ಶೆಟ್ಟಿ: ಅಭಿಮಾನಿಗಳಲ್ಲಿ‌ ಸಂತಸ