ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ‌ ಒಟ್ಟೂ 15 ಸಾವಿರ ಡೋಸ್ ಲಸಿಕೆ ಲಭ್ಯವಿದೆ. ಹೆಚ್ಚಿನ‌ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಲಭ್ಯವಿದ್ದು ಇವುಗಳಲ್ಲಿ 10,300 ಕೋವಿಶೀಲ್ಡ್ ಮತ್ತು 4,700 ಕೋವಾಕ್ಸಿನ್ ಎಂಬ ಮಾಹಿತಿಯನ್ನು ಆರೋಗ್ಯಾಧಿಕಾರಿಗಳು ನೀಡಿದ್ದಾರೆ.

ಯಾವ ತಾಲೂಕಿನಲ್ಲಿ ಎಷ್ಟು ಕೋವಿಶೀಲ್ಡ್ ?

ಅಂಕೋಲಾ 400, ಭಟ್ಕಳ 900, ಹಳಿಯಾಳ 700, ಹೊನ್ನಾವರ 300, ಜೋಯ್ಡಾ 400, ಮುಂಡಗೋಡ 1500, ಕುಮಟಾ‌ 200, ಶಿರಸಿ 1500, ಸಿದ್ದಾಪುರ ,1500, ಯಲ್ಲಾಪುರ 1500, ದಾಂಡೇಲಿ 900, ಜಿಲ್ಲಾಸ್ಪತ್ರೆಯಲ್ಲಿ 1500 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.

ಎಲ್ಲೆಲ್ಲಿ ಕೋವಾಕ್ಸಿನ್ ಲಸಿಕೆ ಲಭ್ಯವಿದೆ ನೋಡಿ?

ಕುಮಟಾ 400, ಶಿರಸಿ‌ 2000, ದಾಂಡೇಲಿ 1000, ನೇವಿ 1300 ಕೋವಾಕ್ಸಿನ್ ಲಸಿಕೆ ಇದೆ.

RELATED ARTICLES  ದಕ್ಷಿಣ ಕನ್ನಡ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷೆ ಕಾದಂಬರಿ, ಕತೆಗಾರ್ತಿ ಎ.ಪಿ. ಮಾಲತಿ.

ಹೊನ್ನಾವರದಲ್ಲಿ ಎಲ್ಲಿ?

ಹೊನ್ನಾವರ ಪಟ್ಟಣ ಪಂಚಾಯತ ಸಭಾ ಭವನದಲ್ಲಿ 300 ಡೋಸ್ ಕೋವಿಸಿಲ್ಡ್ ವಿತರಣೆಯಾಗಲಿದೆ. ಪಸ್ಟ್ ಡೋಸ್ 150, ಎರಡನೆಯ ಡೋಸ್ 150 ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಮಟಾ ತಾಲೂಕಿನಲ್ಲಿ ಎಲ್ಲೆಲ್ಲಿ?

ಕುಮಟಾ ತಾಲೂಕಿನಲ್ಲಿ ನಾಳೆ ಒಟ್ಟು 600 ಲಸಿಕೆ ಲಭ್ಯವಿದ್ದು, 200 ಕೋವಿಶೀಲ್ಡ್ ಮತ್ತು 400 ಕೋವಾಕ್ಸಿನ್ ವ್ಯಾಕ್ಸಿನ್ ಇದೆ. ಈ ಕೆಳಗಿನ ಕೇಂದ್ರದಲ್ಲಿ ನಾಳೆ ವ್ಯಾಕ್ಸಿನೇಷನ್ ನಡೆಯಲಿದೆ.

ನಾಳೆ ಕುಮಟಾದಲ್ಲಿ ನಡೆಯಲಿರುವ ಕೊವಿಡ್ ಲಸಿಕಾ ವಿವರ.

ಒಟ್ಟೂ 200 ಕೊವಿಶಿಲ್ಪ 400 ಕೊವಾಕ್ಸಿನ
ಲಸಿಕೆ ಲಭ್ಯವಿದ್ದು ಇದನ್ನು ಈ ಕೆಳಗಿನಂತೆ
ನೀಡಲಾಗುವುದು.

1. ಸಾರ್ವಜನಿಕ ಆಸ್ಪತ್ರೆ ಕುಮಟಾದಲ್ಲಿ ಕೊವಿಶೀಲ್ಡ 200 ಮೊದಲ ಮತ್ತು ಎರಡನೇ ಡೋಸ್ ನೀಡಲಾಗುವುದು.

RELATED ARTICLES  ಇಸ್ರೊದಿಂದ ಜನವರಿ 10ರಂದು 31 ಉಪಗ್ರಹಗಳ ಉಡಾವಣೆ.

2. ಸರಕಾರಿ ಪದವಿ ಕಾಲೇಜ್ ಕುಮಟಾ – ಕೊವಾಕ್ಸಿನ್ 280 ಡೋಸ್. ಇದನ್ನು ವಿದ್ಯಾರ್ಥಿಗಳಿಗೆ ಎರಡನೇ ಡೋಸ್ ನೀಡಲಾಗುವುದು.

3. ಸರಕಾರಿ ಪದವಿ ಕಾಲೇಜ್ ಬಾಡ ಕೊವಾಕ್ಸಿನ್ 120 ಡೋಸ್. ಇದನ್ನು ವಿದ್ಯಾರ್ಥಿಗಳಿಗೆ ಎರಡನೇ ಡೋಸ್ ನೀಡಲಾಗುವುದು.

ಅಂಕೋಲಾದಲ್ಲಿ 400 ಕೋವಿ ಶೀಲ್ಡ್.

ಅಂಕೋಲಾ ತಾಲೂಕಿನಲ್ಲಿ ಆಗಸ್ಟ್ 10ರ ಬುಧವಾರ 400 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಮೊದಲ ಡೋಸ್ (170), ಎರಡನೇ ಡೋಸ್ (170), ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು (ಬಾಣಂತಿಯರಿಗೆ) 60 ಡೋಸ್ ಲಸಿಕೆ ಕಾಯ್ದಿರಿಸಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.