ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪ ಕ್ರಾಸ್ ಹತ್ತಿರ ಮುಂಡಗೋಡ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಆದ ಸುಲಿಗೆ ಪ್ರಕರಣ, ಬೆಡಸಗಾಂವ ಹಾಗೂ ಕಲಕೊಪ್ಪ ಗ್ರಾಮದಲ್ಲಾದ ಮನೆಕಳ್ಳತನ ಮತ್ತು ಕೊಪ್ಪ ಗ್ರಾಮದ ಪಾಂಡುರಂಗ ದೇವಸ್ಥಾನವನ್ನು ಕಳ್ಳತನ ಮಾಡಿದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಮೇಲಿಂದ ಮೇಲೆ ಆದ ಕಳ್ಳತನ ಹಾಗೂ ಸುಲಿಗೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚುವದು ಪೊಲೀಸ್ ಇಲಾಖೆಗೆ ಒಂದು ಸವಾಲಾಗಿತ್ತು.

ಈ ಪ್ರಕರಣಗಳನ್ನು ಭೇದಿಸಲು ಶ್ರೀ ಪ್ರಭುಗೌಡ ಡಿ.ಕೆ ಪೊಲೀಸ್ ನಿರೀಕ್ಷಕರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಮುಂಡಗೋಡ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕಳ್ಳತನ ಮಾಡಿರುವ ಆರೋಪಿತರ ಪತ್ತೆ ಕಾರ್ಯ ಕೈಗೊಂಡು ಆರೋಪಿತರಾದ

RELATED ARTICLES  ಅನಧಿಕೃತವಾಗಿ ಗಾಂಜಾ ಸಾಗಾಟ : ಆರೋಪಿಗಳು ಅರೆಸ್ಟ್

01].ಅಬ್ದುಲ್ ಸತ್ತಾರ @ ಮಲ್ಲಿಕ ತಂದೆ ಮೆಹಬೂಬ ಷರೀಪ್ ಶೇಖ್ ಪ್ರಾಯ-24 ವರ್ಷ ಸಾ||ಶೃಂಗೇರಿ ತಾ||ಹಾನಗಲ್ ಜಿ||ಹಾವೇರಿ

02].ಶ್ರೀಧರ @ ಸಿರಿ ತಂದೆ ಯಲ್ಲಪ್ಪ ಬಂಡಿವಡ್ಡರ ಪ್ರಾಯ-22 ವರ್ಷ ಸಾ||ಶೃಂಗೇರಿ ತಾ||ಹಾನಗಲ್ ಜಿ||ಹಾವೇರಿ

ಇವರನ್ನು ಬಂಧಿಸಿ, ಆರೋಪಿತರರಿಂದ ರೂ. 01 ಲಕ್ಷಕ್ಕೂ ಅಧಿಕ ಮೌಲ್ಯದ 30 ಗ್ರಾಂ ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಳ್ಳತನದಲ್ಲಿ ಭಾಗಿಯಾಗಿರುವ 3ನೇ ಅರೋಪಿತನು ತಲೆಮರೆಸಿಕೊಂಡಿದ್ದು, ಆತನ ಪತ್ತೆಯ ಕುರಿತು ಪತ್ತೆ ಕಾರ್ಯ ಮುಂದುವರೆದಿರುತ್ತದೆ.

RELATED ARTICLES  ಕಾರಿನಲ್ಲಿದ್ದ ಚಿನ್ನ ಕದ್ದ ಆರೋಪಿ ಪೊಲೀಸ್ ಬಲೆಗೆ..!

ಈ ಪ್ರಕರಣಗಳನ್ನು ಭೇದಿಸಲು ಶಿರಸಿ ಪೊಲಿಸ್ ಉಪಾಧೀಕ್ಷಕರಾದ ಶ್ರೀ ರವಿ ನಾಯ್ಕ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ. ಪ್ರಭುಗೌಡ ಡಿ.ಕೆ., ಪಿಎಸ್ಐ ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ ಶ್ರೀ ನಿಂಗಪ್ಪ ಜಕ್ಕಣ್ಣವರ ಹಾಗೂ ಪೊಲೀಸ್ ಸಿಬ್ಬಂದಿಯವರಾದ ಧರ್ಮರಾಜ, ಗಣಪತಿ, ವಿನಾಯಕ, ತಿರುಪತಿ, ವಿನೋದಕುಮಾರ, ಅರುಣಕುಮಾರ, ಅಣ್ಣಪ್ಪ ಹಾಗೂ ಶರತಕುಮಾರ ರವರು ಭಾಗವಹಿಸಿ, ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಮುಂಡಗೋಡ ಪೊಲೀಸ್ ರವರ ಈ ಪತ್ತೆ ಕಾರ್ಯವನ್ನು ಈ ಮೂಲಕ ಪ್ರಶಂಸಿಲಾಗಿದೆ.