ಶಿರಸಿಯಲ್ಲಿ 3500 ಡೋಸ್ ಲಸಿಕೆ ಲಭ್ಯ
ಶಿರಸಿ: ತಾಲೂಕಿನಲ್ಲಿ ಒಟ್ಟೂ 3500 ಡೋಸ್ ಕೊರೊನಾ ಲಸಿಕೆ ಲಭ್ಯವಿದ್ದು, ಅದರಲ್ಲಿ 1500 ಕೋವಿಶೀಲ್ಡ್ ಲಸಿಕೆ ಮತ್ತು 2000 ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ ಎಂದು ತಾಲೂಕಾಡಳಿತ ಮಾಹಿತಿ ನೀಡಿದೆ.
ಲಭ್ಯವಿರುವ 1500 ಡೋಸ್ ಲಸಿಕೆಯನ್ನು 2ನೇ ಡೋಸ್ ಬಾಕಿಯಿರುವವರಿಗೆ ನೀಡಲಾಗುತ್ತದೆ. ಈ ಲಸಿಕೆಯನ್ನು ಹೆಗಡೆಕಟ್ಟಾದಲ್ಲಿ 300, ರೇವಣಕಟ್ಟಾ 150, ಸಾಲ್ಕಣಿ 150, ಹುಲೇಕಲ್ 150, ಮೆಣಸಿ 200, ಸುಗಾವಿ 250, ಬನವಾಸಿ 150, ದಾಸನಕೊಪ್ಪದಲ್ಲಿ 150 ಡೋಸ್ ಲಸಿಕೆ ನೀಡಲಾಗುತ್ತದೆ.
ಲಭ್ಯವಿರುವ 2000 ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವವರಿಗೆ ನಗರದ ಎಂಇಎಸ್ ಕಾಮರ್ಸ್ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ನೀಡಲಾಗುವುದು ಎಂದು ತಿಳಿಸದೆ.
ಯಲ್ಲಾಪುರದಲ್ಲಿ 1520 ಕೋವಿಶೀಲ್ಡ್ ಲಸಿಕೆ ಲಭ್ಯ
ಯಲ್ಲಾಪುರ ತಾಲೂಕಿನಲ್ಲಿ ಆ.11 ಬುಧವಾರ 1520 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ ಎಂದು ತಾಲೂಕಾಡಳಿತ ಮಾಹಿತಿ ನೀಡಿದೆ.
ಲಭ್ಯವಿರುವ 1520 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ತಾಲೂಕಾಸ್ಪತ್ರೆಯಲ್ಲಿ 300, ಚವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150, ಮಂಚಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200, ಕುಂದರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200, ಕಿರುವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200, ದೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150, ಮಲವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 120, ಕಳಚೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30, ವಜ್ರಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150, ನಂದೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 20 ಡೋಸ್ ಲಸಿಕೆ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.