ಕುಮಟಾ: ಚಿತ್ರಿಗಿ ಮಹಾತ್ಮ ಗಾಂಧಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ಫಲಿತಾಂಶವು, ಕಳೆದ ವರ್ಷದಿಂದ ಜಾರಿಗೆ ಬಂದ ಹೊಸ ಪದ್ಧತಿಯಂತೆ, A ಗ್ರೇಡ್ ಆಗಿದ್ದು, ಗುಣಾತ್ಮಕ ಶೇಕಡ ಫಲಿತಾಂಶವು ಐತಿಹಾಸಿಕ 91.39 % ಆಗಿರುವುದರೊಂದಿಗೆ ಎಲ್ಲ ಪರೀಕ್ಷಾರ್ಥಿಗಳು ಸರ್ವೋತ್ತಿರ್ಣರಾಗಿದ್ದಾರೆ.
ಗುಣಾತ್ಮಕ ಶೇಕಡಾ ಫಲಿತಾಂಶ ಎಂದರೆ ಶಾಲೆಯ ಉತ್ತಿರ್ಣತಾ ಫಲಿತಾಂಶದ 40 ಶೇಕಡ, ಎಲ್ಲ ವಿಷಯದಲ್ಲಿ ಗಳಿಸಿದ ಅಂಕದ ಸರಾಸರಿಯ 40 ಶೇಕಡ ಹಾಗೂ ಡಿಸ್ಟಿಂಕ್ಷನ್ ಮತ್ತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯ 20 ಶೇಕಡಾ ಅಂಕಗಳನ್ನು ಕೂಡಿಸಿ ಲೆಕ್ಕಿಸಲಾಗುತ್ತದೆ.
ಕುಳಿತ 97 ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 68 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು ಕೇವಲ 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಸರ್ವೋನ್ನತ ಸಾಧನೆಗೈದಿದ್ದಾರೆ. ಕುಳಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಇಂಗ್ಲಿಷ್ನಲ್ಲಿ -7, ಹಿಂದಿಯಲ್ಲಿ-3, ತಲಾ ಒಂದೊಂದು ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ಸಮಾಜ ದಲ್ಲಿ ಶತಕ ಅಂಕಗಳನ್ನು ಗಳಿಸಿ ಅಮೋಘ ಸಾಧನೆಗೈದಿರುತ್ತಾರೆ. ಕನ್ನಡ ವಿಷಯದಲ್ಲಿ 7 ವಿದ್ಯಾರ್ಥಿಗಳು 123 ಅಂಕಗಳಿಸಿ ಪ್ರಶಂಸಾರ್ಹ ರಾಗಿದ್ದಾರೆ.
ಕವನಾ ಕಮಲಾಕರ ಪಟಗಾರ- 616, ಸಾತ್ವಿಕ್ ನಾಗೇಶ್ ಭಟ್- 613, ಮುಕ್ತಾ ರಾಮದಾಸ್ ಭಟ್-599, ಪನ್ನಗ ರಾಘವೇಂದ್ರ ಶೇಟ್-599, ನಾಗಶ್ರೀ ಅಶೋಕ್ ನಾಯ್ಕ – 589,ಸಾಜಿಯಾ ರಫೀಖ ಶೇಖ-588, ಪವನ್ ಉಮೇಶ್ ಗುನಗಾ-571, ಲಿಖಿತ ಪರಮೇಶ್ವರ್ ಗುನಗಾ-569, ದೀಕ್ಷಾ ಸತ್ಯನಾರಾಯಣ ಗುನಗಾ-568, ವಿಜೇತಾ ರಘು ನಾಯ್ಕ-568. ಅಂಕಗಳೊಂದಿಗೆ ಶಾಲೆಗೆ ಶ್ರೇಯಾಂಕಿತ ಪ್ರಥಮ ಹತ್ತು ಜನರಾಗಿದ್ದಾರೆ.
ಸಾಧನೆಗೈದ ಸಮಸ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಸಹಕರಿಸಿದ ಪಾಲಕ ವೃಂದಕ್ಕೆ, ಕೆನರಾ ಎಜುಕೇಶನ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ವಸುದೇವ ಪ್ರಭು ಹಾಗೂ ಸಮಸ್ತ ಪದಾಧಿಕಾರಿಗಳು, ಮುಖ್ಯಾಧ್ಯಾಪಕ ವಿಷ್ಣುಭಟ್ ಹಾಗೂ ಶಾಲಾ ಸಿಬ್ಬಂದಿವರ್ಗದವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.