ಕುಮಟಾ: ತಾಲೂಕಿನ ಮಿರ್ಜಾನಿನ ಕೆನರಾ ಬ್ಯಾಂಕಿನ ಸಿಬ್ಬಂದಿ ಕನ್ನಡದಲ್ಲಿ ವ್ಯವಹಾರ ಮಾಡುವುದಿಲ್ಲ ಎಂದು ತಿಳಿದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಬ್ಯಾಂಕನ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಹಣಕಾಸಿನ ವ್ಯವಹಾರಕ್ಕಾಗಿ ಬರುವ ಗ್ರಾಹಕರೊಂದಿಗೆ, ಹಿರಿಯರು,ನಾಗರೀಕರು ಹಾಗೂ ಮಹಿಳೆಯರ ಜೊತೆಗೆ ಬ್ಯಾಂಕ್ ಸಿಬ್ಬಂದಿ ಸರಿಯಾಗಿ ಕನ್ನಡ ಮಾತನಾಡಲ್ಲ ಈ ಕಾರಣಕ್ಕೆ ಗ್ರಾಹಕರಿಗೆ ವ್ಯವಹರಿಸಲು ಕಷ್ಟವಾಗುತ್ತಿದೆ. ಈ ಕೂಡಲೇ ಕನ್ನಡ ಭಾಷೆ ಗೊತ್ತಿರುವ ಸಿಬ್ಬಂದಿ ನೇಮಿಸಬೇಕೆಂದು ಆಗ್ರಹಿಸಿದರು.

RELATED ARTICLES  ನಾಳೆಯಿಂದ ಕೊಂಕಣದಲ್ಲಿ "ರಜತ ಸಂಭ್ರಮ" :ನಡೆಯುತ್ತಿದೆ ಸಕಲ ಸಿದ್ಧತೆ: ಪ್ರತಿ ದಿನದ ಕಾರ್ಯಕ್ರಮದ ವಿವರ ಇಲ್ಲಿದೆ

ಕರವೇ ಅಧ್ಯಕ್ಷ ಭಾಸ್ಕರ್‌ ಪಟಗಾರ ಮಾತನಾಡಿ ಈ ಬ್ಯಾಂಕ್‌ನಲ್ಲಿ ಹಲವಾರು ಗ್ರಾಹಕರಿದ್ದಾರೆ ಬ್ಯಾಂಕ್ ನ ಸಿಬ್ಬಂದಿ ಬೇಜವಾಬ್ದಾರಿಯ
ವರ್ತನೆ ಹಾಗೂ ನಿಧಾನಗತಿಯಿಂದ ಗ್ರಾಹಕರು
ಅಸಮಾಧಾನಗೊಂಡಿದ್ದಾರೆ. ಕರ್ನಾಟಕದಲ್ಲಿ ಕಾರ್ಯ ಮಾಡುವವರು ಕನ್ನಡ ಕಲಿಯುವ ಸೌಜನ್ಯವನ್ನಾದರೂ ಹೊಂದಿರಬೇಕು ಎಂದರು.

RELATED ARTICLES  ಅ. 22 ಶನಿವಾರ ಕೊಂಕಣದ ಆವಾರದಲ್ಲಿ "ದೀಪಾವಳಿ ಮೇಳ"

ಅನೇಕ ಬ್ಯಾಂಕ್ ಗಳಲ್ಲಿಯೂ ಇದೇ ಸಮಸ್ಯೆ ಇದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಅವರ ಸ್ಥಳದಲ್ಲಿ ಬೇರೊಬ್ಬರನ್ನು ನೇಮಿಸಬೇಕು. ಬ್ಯಾಂಕಿನ ಸಿಬ್ಬಂದಿ ಹೆಚ್ಚಾಗಿ ಹಿಂದಿ ಭಾಷೆ ಬಳಸುತ್ತಾರೆ. ಕನ್ನಡವೇ ಆಡಳಿತ ಭಾಷೆಯಾಗಿರುವುದರಿಂದ ಕನ್ನಡವನ್ನೇ ಬಳಸಬೇಕು ಎಂದರು ಈ ಸಂದರ್ಭದಲ್ಲಿ ಶಿವರಾಮ್ ಹರಿಕಾಂತ, ಉದಯ ಹರಿಕಾಂತ ಇದ್ದರು.