ಕಾರವಾರ : ಉತ್ತರಕನ್ನಡದ ಜನರಿಗೆ ಇಂದು ಕರೋನಾ ಆಘಾತ ನೀಡಿದೆ ಪ್ರತಿದಿನ 50ರ ಸನಿಹ ಬರುತ್ತಿದ್ದ ಪ್ರಕರಣ ಇಂದು 83ಕ್ಕೆ ಏರಿಕೆಯಾಗಿದೆ. ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನ ಪ್ರಕಾರ ರವಿವಾರ 83 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ. ಹೆಲ್ತ ಬುಲೆಟಿನ್ ಪ್ರಕಾರ 2 ಸಾವಾಗಿದ್ದು ಕಾರವಾರದಲ್ಲಿ ಎರಡು ಸಾವು ಸಂಭವಿಸಿದೆ. ಒಟ್ಟೂ ಸಾವಿನ ಸಂಖ್ಯೆ 745 ಕ್ಕೆ ಏರಿದೆ.

ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 21, ಅಂಕೋಲಾದಲ್ಲಿ 8, ಕುಮಟಾದಲ್ಲಿ 16, ಹೊನ್ನಾವರ 5, ಭಟ್ಕಳದಲ್ಲಿ 1, ಶಿರಸಿಯಲ್ಲಿ 12, ಸಿದ್ದಾಪುರದಲ್ಲಿ 4, ಯಲ್ಲಾಪುರದಲ್ಲಿ 2, ಮುಂಡಗೋಡ 3, ಹಳಿಯಾಳದಲ್ಲಿ 0, ಮತ್ತು ಜೋಯಿಡಾದಲ್ಲಿ ಒಟ್ಟೂ 83 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಚನ್ನಣ್ಣನವರ್ ಗೆ ಸಿಂಹ ಟಾಂಗ್

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 458 ಆಗಿದ್ದು, ಅವರಲ್ಲಿ 105 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 353 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 14, ಅಂಕೋಲಾ‌ 5, ಕುಮಟಾ 14, ಹೊನ್ನಾವರ 1, ಭಟ್ಕಳ 5, ಶಿರಸಿ 5, ಸಿದ್ದಾಪುರ 7, ಯಲ್ಲಾಪುರ 0, ಮುಂಡಗೋಡ 1, ಹಳಿಯಾಳ 0, ಜೋಯ್ಡಾ 0 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 52 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಸದ್ದಿಲ್ಲದೆ ಏರುತ್ತಿದೆ ಕೊರೋನಾ ? ಉತ್ತರಕನ್ನಡಿಗರೇ ಎಚ್ಚರ..!

ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಕಾರವಾರದಲ್ಲಿ ಅತಿ ಹೆಚ್ಚು ಅಂದರೆ 21 ಜನರಲ್ಲಿ, ಕುಮಟಾ ಎರಡನೆಯ ಸ್ಥಾನ ಅಂದರೆ ತಲಾ 16 ಜನರಲ್ಲಿ ಕರೋನಾ ಕಾಣಿಸಿಕೊಂಡಿದೆ.

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.