ಹೊನ್ನಾವರ: ನಿರಂತರವಾಗಿ ಬೀಳುತ್ತಿರುವ ಮಳೆ ಜನತೆಗೆ ಸಂಕಷ್ಟ ತಂದೊಡ್ಡುತ್ತಿದೆ. ಶರಾವತಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದೆ.

ಲಿಂಗನಮಕ್ಕಿ ಜಲಾಶಯದ ಗರಿಷ್ಟ ಮಟ್ಟವು 1819.00 ಅಡಿಗಳಾಗಿದ್ದು , ಈಗಿನ ಜಲಾಶಯದ ಮಟ್ಟ ದಿನಾಂಕ 12 -08 2021 ರಂದು ಬೆಳಿಗ್ಗೆ 08.00 ಘಂಟೆಗೆ 1812,00 ಅಡಿಗಳಾಗಿರುತ್ತದೆ. ಈ ದಿನದ ಲಿಂಗನಮಕ್ಕಿ ಜಲಾಶಯದ ಒಳಹರಿವು ಸುಮಾರು 11,14 ಕ್ಯೂಸೆಕ್ಸ್ ಆಗಿರುತ್ತದೆ. ಇದೇ ರೀತಿ ಜಲಾಶಯಕ್ಕೆ ನೀರಿ ಒಳಹರಿದ್ದ ಮುಂದುವರೆದರೆ ಜಲಾಶಯವು ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಲಿಂಗನಮಕ್ಕಿ ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಹೆಚ್ಚಾದ ನೀರನ್ನು ಹೊರಬಿಡಲಾಗುವುದು ಎಂಬ ಸೂಚನೆಯೂ ಹೊರಬಂದಿದೆ.

RELATED ARTICLES  ಪಂಜಾಬ್‌ ಮುಖ್ಯಮಂತ್ರಿ ಮನೆಯೆದುರು ಬಾಂಬ್..?

ಹೀಗಾಗಿ ಶರಾವತಿ ನದಿಯ ಎಡ ಮತ್ತು ಬಲ ಭಾಗದ ತೀರದಲ್ಲಿ ವಾಸಿಸುವ ಸಾರ್ವಜನಿಕರು ತಮ್ಮ ಜನ, ಜಾನವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಕೊಳ್ಳಬೇಕೆಂದು ಎಚ್ಚರಿಸಲಾಗಿದೆ.

RELATED ARTICLES  ಕುಮಟಾ, ಹೊನ್ನಾವರದಲ್ಲಿ ನಾಳೆ ಎಲ್ಲೆಲ್ಲಿ ಕೋವಿಡ್ ಲಸಿಕಾಕರಣ?