ಯಲ್ಲಾಪುರ: ಅಪರಿಚಿತ ವ್ಯಕ್ತಿಯೋರ್ವನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಶವವೊಂದು ತಾಲೂಕಿನ ಕಣ್ಣಿಗೇರಿ ಬಳಿಯ ಕೃಷ್ಣಗದ್ದೆ ಬಸ್ ತಂಗುದಾಣದ ಹಿಂಬದಿಯಲ್ಲಿ ಪತ್ತೆಯಾಗಿದೆ.

ಸುಮಾರು 35-40 ವರ್ಷದ ವ್ಯಕ್ತಿಯ ಶವ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವ ಕೊಳೆತು ಹೋಗಿದೆ. ಈತ 7-8 ದಿವಸಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.

RELATED ARTICLES  ಕಿತ್ತಳೆ ಬಣ್ಣದ ಪಾಸ್ ಪೋರ್ಟ್: ನಿರ್ಧಾರದಿಂದ ಹಿಂದೆ ಸರಿದ ಕೇಂದ್ರ ಸರ್ಕಾರ

ಪಕ್ಕದಲ್ಲೇ ಚಪ್ಪಲಿ, ಬ್ಯಾಗ್, ಟವೆಲ್ ಇತರ ಸಾಮಗ್ರಿಗಳು ಬಿದ್ದಿವೆ. ಗೋಧಿ ಬಣ್ಣ ಹೊಂದಿದ 5.5 ಅಡಿ ಎತ್ತರದ ವ್ಯಕ್ತಿ, ನೀಲಿ ಮತ್ತು ಬಿಳಿ ಬಣ್ಣದ ಅಂಗಿ, ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಗುರುತು ಪತ್ತೆಗೆ ಪೋಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 01-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಈ ಚಹರೆಯ ವ್ಯಕ್ತಿಯ ವಾರಸುದಾರರು ಅಥವಾ ವ್ಯಕ್ತಿಯ ಗುರುತು ತಿಳಿದವರು ಯಲ್ಲಾಪುರ ಠಾಣೆಯನ್ನು ಸಂಪರ್ಕಿಸಬಹುದು.