ಕುಮಟಾ: ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕುಮಟಾ ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯ ತಣ್ಣೀರಕುಳಿಯಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಹೈಟೆಕ್ ಅಂಗನವಾಡಿ ಕೇಂದ್ರವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿಕ್ಕ ಮಕ್ಕಳಿಗೆ ಅನುಕೂಲವಾಗಲು ಹೈಟೆಕ್ ಅಂಗನವಾಡಿ ಕೇಂದ್ರ ತೆರೆಯುವ ಬಗ್ಗೆ ನನ್ನ ವಿಚಾರಿಸಿದಾಗ ಹಾಲಕ್ಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕುಮಟಾ ತಾಲೂಕಿನ ಹೆಗಡೆಯ ತಣ್ಣೀರಕುಳಿಯಲ್ಲಿ ನಿರ್ಮಿಸಿ,ಅವರು
ಇನ್ನೂ ಸುಶಿಕ್ಷಿತರಾಗಬೇಕು.ಆ ತಾಯಂದಿರಿಗೂ ತನ್ನ ಮಗು ಅಂಗನವಾಡಿಗೆ ಹೋಗಿ ಮುಂದೆ ಉನ್ನತ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಆಸೆ ಬರುವಂತಾಗಬೇಕು. ಹಾಲಕ್ಕಿ ಜನರು ಅಂತ್ಯಂತ ಪ್ರಾಮಾಣಿಕರು. ಈ ಕಾರಣದಿಂದ ಹೆಗಡೆಯ ತಣ್ಣೀರಕುಳಿಗೆ ಹೈಟೆಕ್ ಅಂಗನವಾಡಿ ನೀಡಿ ಎಂದು ವಿನಂತಿಸಿದ್ದೆ. ಅದೃಷ್ಟವಾಗಿ ಹೈಟೆಕ್ ಅಂಗನವಾಡಿ ಇಲ್ಲಿಗೆ ನೀಡಿದ್ದಾರೆ. ಜೊತೆಗೆ ಅತ್ಯಂತ ವ್ಯವಸ್ಥಿತ ಸುಸಜ್ಜಿತವಾದ ಅಂಗನವಾಡಿ ಉದ್ಘಾಟನೆಗೊಂಡಿದೆ
ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರತ್ನಾಕರ ನಾಯ್ಕ, ಜಿಲ್ಲಾಡಳಿತಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.