ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಈ ಹಿಂದಿನದಕ್ಕಿಂತ ಅತೀ ಹೆಚ್ಚು ಲಸಿಕೆ ನಾಳೆ ಲಭ್ಯವಿರುವ ಬಗ್ಗೆ ಮಾಹಿತಿ ಬಂದಿದೆ. ಉತ್ತರಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಈ ಲಸಿಕೆಗಳ ಹಂಚಿಕೆ ನಡೆಯಲಿದೆ. ನಾಳೆ ಅತಿಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಲಭ್ಯವಿದೆ.

ನಾಳೆ ಉತ್ತರಕನ್ನಡದಲ್ಲಿ ಒಟ್ಟೂ ಕೋವಿಶೀಲ್ಡ್ – 19,700 ಮತ್ತು ಕೋವಾಕ್ಸಿನ್ – 2,100 ಲಭ್ಯವಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ಲಸಿಕಾಕರಣದ ಬಗೆಗೆ ಹಾಗೂ ಇತರ ಮಾಹಿತಿಗಾಗಿ ಸಾರ್ವಜನಿಕರು ತಮ್ಮ ತಮ್ಮ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತರನ್ನು ಸಂಪರ್ಕಿಸಿ, ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಕೋವಿಶೀಲ್ಡ್ ಎಲ್ಲೆಲ್ಲಿ?

ಅಂಕೋಲಾದಲ್ಲಿ 1,500 , ಭಟ್ಕಳ 2,000 , ಹಳಿಕಾಳ 1,500 ಹೊನ್ನಾವರ 3,000 ಜೋಯ್ಡಾ 700, ಕಾರವಾರ 200, ಮುಂಡಗೋಡ 1,000, ಕುಮಟಾ 3,000, ಶಿರಸಿ 1,400, ಸಿದ್ದಾಪುರ 1,000, ಯಲ್ಲಾಪುರ 1,000, ದಾಂಡೇಲಿ 1,000, ನೇವಿ 100 ಮತ್ತು ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ.

RELATED ARTICLES  ಧೋನಿ ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಮುಂದುವರೆಯಲಿ: ಲಕ್ಷ್ಮಣ್

ಕೋವ್ಯಾಕ್ಸಿನ್ ಎಲ್ಲೆಲ್ಲಿ?

ಹೊನ್ನಾವರದಲ್ಲಿ 400, ಕುಮಟಾ 8,00, ಶಿರಸಿ 500 ಮತ್ತು ಜಿಲ್ಲಾ ವ್ಯಾಕ್ಸಿನ್ ಸಂಗ್ರಹಗಾರದಲ್ಲಿ 400 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ.

ನಾಳೆ ಲಭ್ಯವಿರುವ ಲಸಿಕೆಗಳನ್ನು ಪಡೆಯುವ ಮೂಲಕ ಸಾರ್ವಜನಿಕರು ಕೊರೋನಾ ನಿಯಂತ್ರಣಕ್ಕಾಗಿ ಮುಂದಡಿ ಇಡಬೇಕು ಹಾಗೂ ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು/ ತಾಲೂಕಾ ಆರೋಗ್ಯ ಸಿಬ್ಬಂಧಿಗಳಿಂದ ಮಾಹಿತಿ ಪಡೆದು ಲಸಿಕಾಕರಣದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.

ನಾಳೆ ಕುಮಟಾದಲ್ಲಿ ಎಲ್ಲಿ?

ನಾಳೆ ಕುಮಟಾದಲ್ಲಿ ಒಟ್ಟೂ 800 ಕೋ ವ್ಯಾಕ್ಸೀನ್ ಹಾಗೂ 3000 ಕೋವೀಶೀಲ್ಡ ಲಸಿಕೆ ಲಭ್ಯವಿದ್ದು, PHC ಬಂಕಿಕೊಡ್ಲ, PHC ಗೋಕರ್ಣ, ಬರ್ಗಿ HPS, HPS ಪಡುವಣಿ, PHP ಕತಗಾಲ, PHP ಕಾಗಾಲ, ಕೋನಳ್ಳಿ ಸಭಾಭವನ, ಹೊಲನಗದ್ದೆ ಪಂಚಾಯತ, ಮಿರ್ಜಾನ ಪಂಚಾಯತ, PHP ಮುರೂರು, ಹೆಗಡೆ ಗಂಡುಮಕ್ಕಳ ಶಾಲೆ ಹಾಗೂ ತಣ್ಣೀರಕುಳಿ ಶಾಲೆ, ಸಿದ್ದಿ ವಿನಾಯಕ ಸಭಾಭವನದಲ್ಲಿ ಲಸಿಕಾಕರಣ ನಡೆಯಲಿದೆ. ಎಲ್ಲಾ ಕಡೆಗಳಲ್ಲಿ ಕೋವೀಶೀಲ್ಡ್ ಲಸಿಕೆಯ ಮೊದಲ ಡೋಸ್ ಹಾಗೂ ಎರಡನೇ ಡೋಸ್ ನೀಡಲಾಗುವುದು. ಆಯಾ ವಿಭಾಗಕ್ಕೆ ಲಭ್ಯತೆ ಆಧಾರದಲ್ಲಿ ನೀಡಲಾಗುವುದು ಎಂದು ತಿಳಿದುಬಂದಿದೆ.

RELATED ARTICLES  ಬೆಂಗಳೂರಿಗರೇ ನಾಳೆ ಈ ರಸ್ತೆಯಲ್ಲಿ ಸಂಚಾರ ಮಾಡೋದಿದ್ರೆ ರೂಟ್ ಬದಲಾಯಿಸಿಕೊಳ್ಳಿ.

ಅಂಕೋಲಾದ ವಿವರ

ಅಂಕೋಲಾ: ತಾಲೂಕಿನಲ್ಲಿ ನಾಳೆ ಒಟ್ಟೂ 1500 ಕೋವಿ ಶೀಲ್ಡ್ ಲಸಿಕೆ ಲಭ್ಯವಿದೆ. ಹಳವಳ್ಳಿ, ಅಲಗೇರಿ, ಕಸಬಾ ಕೇಣಿಗಳಲ್ಲಿ ತಲಾ 200 ಡೋಸ್ ಲಸಿಕೆಗಳು ನೀಡಲಾಗುತ್ತಿದ್ದು ಅವುಗಳಲ್ಲಿ ಪ್ರಥಮ ಡೋಸ್ ಗಾಗಿ(100), ದ್ವಿತೀಯ ಡೋಸ್ (80), ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ (20) ಕಾಯ್ದಿರಿಸಲಾಗಿದೆ. ಹಿಲ್ಲೂರು, ಅಚವೆ,ಪಟ್ಟಣದ ಸ್ವಾತಂತ್ರ‍್ಯ ಸಂಗ್ರಾಮ ಸ್ಮಾರಕ ಭವನಗಳಲ್ಲಿಯೂ ತಲಾ 200 ಡೋಸ್ ಲಸಿಕೆಗಳು ಲಭ್ಯವಿದೆ. ಅವುಗಳಲ್ಲಿ ಪ್ರಥಮ ಡೋಸ್ (80), ದ್ವಿತೀಯ (80) ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ(40) ಕಾಯ್ದಿರಿಸಲಾಗಿದೆ. ಕಣಗೀಲದಲ್ಲಿ 300 ಡೋಸ್ ಲಸಿಕೆ ಲಭ್ಯವಿದ್ದು ಪ್ರಥಮ (140), ದ್ವಿತೀಯ (140),ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ ( 20) ಲಸಿಕೆ ಕಾಯ್ದಿರಿಸಲಾಗಿದೆ ಎನ್ನಲಾಗಿದೆ.