ಹೊನ್ನಾವರ ತಾಲೂಕಿನಲ್ಲಿ 2,040 ವ್ಯಾಕ್ಸಿನ್..
ಹೊನ್ನಾವರ : 1800 ಕೋವಿಶೀಲ್ಡ್, 240 ಕೋವ್ಯಾಕ್ಸಿನ್ ಲಭ್ಯವಿದ್ದು, 50-50 ಮಾದರಿಯಲ್ಲಿ ಪಸ್ಟ್ ಡೋಸ್ ಸೆಕೆಂಡ್ ಡೋಸ್ ವಿತರಣೆ ಮಾಡಲಾಗುವುದು. ಕಡೋತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250 ಕೋವಿಶೀಲ್ಡ್, ಹಳದಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 190 ಕೋವಿಶೀಲ್ಡ್, 70 ಕೋವ್ಯಾಕ್ಸಿನ್ ಮತ್ತು ಹೋಸಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250 ಕೋವಿಶೀಲ್ಡ್ ಲಭ್ಯವಿದೆ. ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಕೋವಿಶೀಲ್ಡ್, 30 ಕೋವ್ಯಾಕ್ಸಿನ್ ಲಭ್ಯವಿದೆ. ಸಂಶಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250 ಕೋವಿಶೀಲ್ಡ್ , ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರ ಮೋಳ್ಕೋಡ ಕಾಸರಕೋಡ ಸೇರಿ 450 ಕೋವಿಶೀಲ್ಡ್ 150 ಕೋವ್ಯಾಕ್ಸಿನ್, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250 ಲಸಿಕೆ ಲಭ್ಯವಿದೆ.
ನಾಳೆ ಕುಮಟಾದಲ್ಲಿ ಎಲ್ಲಿ?
ನಾಳೆ ಕುಮಟಾದಲ್ಲಿ ಒಟ್ಟೂ 800 ಕೋ ವ್ಯಾಕ್ಸೀನ್ ಹಾಗೂ 3000 ಕೋವೀಶೀಲ್ಡ ಲಸಿಕೆ ಲಭ್ಯವಿದ್ದು, PHC ಬಂಕಿಕೊಡ್ಲ, PHC ಗೋಕರ್ಣ, ಬರ್ಗಿ HPS, HPS ಪಡುವಣಿ, PHP ಕತಗಾಲ, PHP ಕಾಗಾಲ, ಕೋನಳ್ಳಿ ಸಭಾಭವನ, ಹೊಲನಗದ್ದೆ ಪಂಚಾಯತ, ಮಿರ್ಜಾನ ಪಂಚಾಯತ, PHP ಮುರೂರು, ಹೆಗಡೆ ಗಂಡುಮಕ್ಕಳ ಶಾಲೆ ಹಾಗೂ ತಣ್ಣೀರಕುಳಿ ಶಾಲೆ, ಸಿದ್ದಿ ವಿನಾಯಕ ಸಭಾಭವನದಲ್ಲಿ ಲಸಿಕಾಕರಣ ನಡೆಯಲಿದೆ. ಎಲ್ಲಾ ಕಡೆಗಳಲ್ಲಿ ಕೋವೀಶೀಲ್ಡ್ ಲಸಿಕೆಯ ಮೊದಲ ಡೋಸ್ ಹಾಗೂ ಎರಡನೇ ಡೋಸ್ ನೀಡಲಾಗುವುದು. ಆಯಾ ವಿಭಾಗಕ್ಕೆ ಲಭ್ಯತೆ ಆಧಾರದಲ್ಲಿ ನೀಡಲಾಗುವುದು ಎಂದು ತಿಳಿದುಬಂದಿದೆ.
ಅಂಕೋಲಾದ ವಿವರ
ಅಂಕೋಲಾ: ತಾಲೂಕಿನಲ್ಲಿ ನಾಳೆ ಒಟ್ಟೂ 1500 ಕೋವಿ ಶೀಲ್ಡ್ ಲಸಿಕೆ ಲಭ್ಯವಿದೆ. ಹಳವಳ್ಳಿ, ಅಲಗೇರಿ, ಕಸಬಾ ಕೇಣಿಗಳಲ್ಲಿ ತಲಾ 200 ಡೋಸ್ ಲಸಿಕೆಗಳು ನೀಡಲಾಗುತ್ತಿದ್ದು ಅವುಗಳಲ್ಲಿ ಪ್ರಥಮ ಡೋಸ್ ಗಾಗಿ(100), ದ್ವಿತೀಯ ಡೋಸ್ (80), ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ (20) ಕಾಯ್ದಿರಿಸಲಾಗಿದೆ. ಹಿಲ್ಲೂರು, ಅಚವೆ,ಪಟ್ಟಣದ ಸ್ವಾತಂತ್ರ‍್ಯ ಸಂಗ್ರಾಮ ಸ್ಮಾರಕ ಭವನಗಳಲ್ಲಿಯೂ ತಲಾ 200 ಡೋಸ್ ಲಸಿಕೆಗಳು ಲಭ್ಯವಿದೆ. ಅವುಗಳಲ್ಲಿ ಪ್ರಥಮ ಡೋಸ್ (80), ದ್ವಿತೀಯ (80) ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ(40) ಕಾಯ್ದಿರಿಸಲಾಗಿದೆ. ಕಣಗೀಲದಲ್ಲಿ 300 ಡೋಸ್ ಲಸಿಕೆ ಲಭ್ಯವಿದ್ದು ಪ್ರಥಮ (140), ದ್ವಿತೀಯ (140),ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ ( 20) ಲಸಿಕೆ ಕಾಯ್ದಿರಿಸಲಾಗಿದೆ ಎನ್ನಲಾಗಿದೆ.
ಇನ್ನು ಉಳಿದಂತೆ ಕೋವಿಶೀಲ್ಡ್ ಎಲ್ಲೆಲ್ಲಿ?
ಅಂಕೋಲಾದಲ್ಲಿ 1,500 , ಭಟ್ಕಳ 2,000 , ಹಳಿಕಾಳ 1,500 ಹೊನ್ನಾವರ 3,000 ಜೋಯ್ಡಾ 700, ಕಾರವಾರ 200, ಮುಂಡಗೋಡ 1,000, ಕುಮಟಾ 3,000, ಶಿರಸಿ 1,400, ಸಿದ್ದಾಪುರ 1,000, ಯಲ್ಲಾಪುರ 1,000, ದಾಂಡೇಲಿ 1,000, ನೇವಿ 100 ಮತ್ತು ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ.
ಕೋವ್ಯಾಕ್ಸಿನ್ ಎಲ್ಲೆಲ್ಲಿ?
ಹೊನ್ನಾವರದಲ್ಲಿ 400, ಕುಮಟಾ 8,00, ಶಿರಸಿ 500 ಮತ್ತು ಜಿಲ್ಲಾ ವ್ಯಾಕ್ಸಿನ್ ಸಂಗ್ರಹಗಾರದಲ್ಲಿ 400 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ.
ನಾಳೆ ಲಭ್ಯವಿರುವ ಲಸಿಕೆಗಳನ್ನು ಪಡೆಯುವ ಮೂಲಕ ಸಾರ್ವಜನಿಕರು ಕೊರೋನಾ ನಿಯಂತ್ರಣಕ್ಕಾಗಿ ಮುಂದಡಿ ಇಡಬೇಕು ಹಾಗೂ ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು/ ತಾಲೂಕಾ ಆರೋಗ್ಯ ಸಿಬ್ಬಂಧಿಗಳಿಂದ ಮಾಹಿತಿ ಪಡೆದು ಲಸಿಕಾಕರಣದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.