ಕಾರವಾರ : ಪಶ್ಚಿಮ ಘಟ್ಟಗಳ ರುದ್ರ ರಮಣೀಯ ದೃಶ್ಯ ಹಾಗೂ ಅರಬ್ಬೀ ಸಮುದ್ರದ ಸೌಂದರ್ಯ ಸವಿಯುತ್ತ ರೈಲಿನ ಪ್ರಯಾಣ ಮಾಡುವ ಜನತೆಯ ಕನಸು ನನಸಾಗುವ ಕಾಲ ಮತ್ತೆ ಸನ್ನಿಹಿತವಾಗಿದೆ.
ಬೆಂಗಳೂರಿನಿಂದ ಮಂಗಳೂರು ಮುಖಾಂತರ ಕಾರವಾರಕ್ಕೆ ಆಗಮಿಸುವ ರೈಲಿಗೆ ವಿಸ್ಟಾಡೋಮ್ ಕೋಚ್ ಅಳವಡಿಸಿ, ಇದೇ ಅಗಸ್ಟ 16 ರಿಂದ ಪ್ರಯಾಣ ಆರಂಭಿಸಲಿದೆ.
ಕೊರೋನಾ ಸೊಂಕಿನ ಹಿನ್ನೆಲೆಯಲ್ಲಿ ತಾತ್ಕಾಲಿಕ ಸ್ಥಗಿತಗೊಂಡಿದ್ದ ವಿಸ್ಟಾಡೋಮ್ ಪ್ರಯಾಣ, ಪುನಃ ಆರಂಭಗೊಳ್ಳಲಿದೆ. ಬೆಂಗಳೂರು ಕಾರವಾರ (06211/06212) ಹಗಲು ರೈಲು ಆಗಸ್ಟ್ 16 ರಿಂದ ಒಂದು ಹೊಸ ವಿಸ್ಟಾಡೋಮ್ ಕೋಚ್ (40 ಸೀಟು)ನೊಂದಿಗೆ ಪುನಾರಂಭಗೊಳ್ಳಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.