ಕುಮಟಾ : ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಲಿರುವ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗುಡ್ ಕಾಗಾಲದ ಶಂಕರ ಹರಿಕಂತ್ರ ಅವರಿಗೆ ತನ್ನ ಹುಟ್ಟೂರಿನಲ್ಲಿ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಧ್ವಜಾರೋಹಣಮಾಡಿ ರಾಷ್ಟ್ರಕ್ಕೆ ಗೌರವ ನೀಡಬೇಕೆಂಬ ಅತೀವ ಕಳಕಳಿಇತ್ತು ಕಳೆದ ವರ್ಷವೇ ತನ್ನ ಗೆಳೆಯರೊಡನೆ ಸೇರಿ ಅಂಗನವಾಡಿಯ ಬಳಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶಾಭಿಮಾನ ಮೆರೆದಿದ್ದರು.
ಈ ಬಾರಿ ಧ್ವಜಾರೋಹಣದ ಪೂರ್ವದಲ್ಲಿ ಒಂದು ಸುಂದರ ಧ್ವಜಸ್ತಂಭ ನಿರ್ಮಾಣ ಮಾಡಿ ಧ್ವಜಾರೋಹಣ ಮಾಡಲೇ ಬೇಕೆಂಬ ನಿರ್ಧಾರವನ್ನು ಮಾಡಿದ್ದರು. ಈ ನಿಟ್ಟಿನಲ್ಲಿ ಸಿದ್ಧತೆ ನೆಡೆಸುತ್ತಿರುವ ವೇಳೆಯಲ್ಲಿ ಅತೀವ ಮಳೆಯಿಂದ ಊರಲ್ಲಿ ಪ್ರವಾಹ ಉಂಟಾಗಿ ಎಲ್ಲರೂ ಗೊಂದಲದಲ್ಲಿ ಇದ್ದಾಗ ತಮ್ಮ ಇಚ್ಛೆ ಇಡೇರುವುದೋ ಇಲ್ಲವೋ ಎಂಬ ಆತಂಕ ಉಂಟಾಗಿತ್ತು. ಈ ವೇಳೆಯಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಕ್ರಮದ ನಿಮಿತ್ತ ಕ್ಷೇತ್ರದಾದ್ಯಂತ ಓಡಾಡುತ್ತಿದ್ದ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರಿಗೆ ಸೈನಿಕ ಶಂಕರ ಹರಿಕಂತ್ರ ಅವರ ಮನದಾಳದ ಬಯಕೆಯ ಕುರಿತು ಸ್ಥಳೀಯರಾದ ಚಿದಾನಂದ ಭಂಡಾರಿ ಕಾಗಾಲ ಅವರ ಮೂಲಕ ತಿಳಿದು ಬಂದು ದೇಶ ಕಾಯುವ ಸೈನಿಕನ ಈ ಕೋರಿಯು ಯಾವುದೇ ಪರಿಸ್ಥಿತಿಯಲ್ಲಿಯೂ ಇಡೇರಿಸಲೇ ಬೇಕೆಂದು ತಕ್ಷಣವೇ ಧ್ವಜಸ್ತಂಭ ನಿರ್ಮಾಣಕ್ಕೆ ಕ್ರಮಕೈಗೊಂಡರು.
ಸ್ಥಳಿಯರ ಸಹಕಾರದೊಂದಿಗೆ ಎರಡೇ ದಿನದಲ್ಲಿ ಧ್ವಜಸ್ತಂಭ ನಿರ್ಮಿಸಿದರು.75 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ದೇಶ ಕಾಯುವ ಸೈನಿಕನ ಕೋರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಶಾಸಕರ ಬಗ್ಗೆ ಜನತೆಯಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಲಿದೆ.ಧ್ವಜಾರೋಹಣದ ಸಂಭ್ರಮಕ್ಕಾಗಿ ನೂತನ ಧ್ವಜಸ್ತಂಭ ಅಲಂಕಾರಗೊಂಡು ಸಿದ್ಧವಾಗಿದೆ.