ಕುಮಟಾ : ತಾಲೂಕಿನ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಪ್ರಮುಖರು ಹಾಗೂ ಶಾಸಕ ದಿನಕರ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಕೊಂಡಿದ್ದರು. ನೂತನ ಸಚಿವರನ್ನ ಜನರಿಗೆ ಪರಿಚಯಿಸುವ ದಿಸೆಯಲ್ಲಿ ಜನಾಶೀರ್ವಾದ ಯಾತ್ರೆ ಪ್ರಾರಂಭಗೊಳ್ಳಲಿದ್ದು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಮಾಹಿತಿ ನೀಡಿದರು.

ಕೇಂದ್ರದ ನೂತನ ಸಚಿವ ಸಂಪುಟದ ಸಚಿವರನ್ನು ಸಂಸತ್ತಿನ ಅಧಿವೇಶನದಲ್ಲಿ ಪರಿಚಯಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಅವಕಾಶ ನೀಡದೆ ಕಾಂಗ್ರೆಸ್ ಸಹಿತ ವಿಪಕ್ಷಗಳು ಅಡ್ಡಿ ಪಡಿಸಿದ್ದವು. ವಿಪಕ್ಷಗಳ ಕುತಂತ್ರಕ್ಕೆ ಪ್ರತಿಯಾಗಿ ನೂತನ ಸಚಿವರನ್ನು ಜನರಿಗೆ ಪರಿಚಯಿಸಲು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಆಗಸ್ಟ್ 16 ರಿಂದ “ಜನಾಶೀರ್ವಾದ ಯಾತ್ರೆ” ಪ್ರಾರಂಭಗೊಳ್ಳಲಿದೆ.

RELATED ARTICLES  Lime FX Отзывы О Форекс Брокере

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ಮಾನ್ಯ ರಾಜ್ಯ ಸಚಿವರಾದ ಶ್ರೀ ರಾಜೀವ ಚಂದ್ರಶೇಖರ ಅವರು ಜನಶೀರ್ವಾದ ಯಾತ್ರೆಯ ಮೂಲಕ ದಿನಾಂಕ 16-08-2021 ರಂದು ಸೋಮವಾರ ಉತ್ತರಕನ್ನಡಕ್ಕೆ ಆಗಮಿಸಲಿದ್ದಾರೆ, ಈ ಕುರಿತು ಭಾರತೀಯ ಜನತಾ ಪಾರ್ಟಿ ಕುಮಟಾ ಮಂಡಲ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ಶಾಸಕ ದಿನಕರ ಶೆಟ್ಟಿ ವಿವರಿಸಿದರು.

RELATED ARTICLES  ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆ ಒಲಿದ ವಿಜಯಲಕ್ಷ್ಮಿ

ಈ ವೇಳೆ ಅಧ್ಯಕ್ಷರಾದ ಶ್ರೀ ಹೇಮಂತ್ ಕುಮಾರ್ ಗಾವಂಕರ್,ಹಿರಿಯರಾದ ಶ್ರೀ ವಿನೋದ್ ಪ್ರಭು ,ನಿಕಟಪೂರ್ವ ಅಧ್ಯಕ್ಷರಾದ  ಶ್ರೀ ಕುಮಾರ್ ಮಾರ್ಕಂಡೇಯ ,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಿ ಐ ಹೆಗಡೆ,ಶ್ರೀ ವಿನಾಯಕ್ ನಾಯ್ಕ್,ಮಂಡಲ ಕಾರ್ಯದರ್ಶಿ ಶ್ರೀ ತಿಮ್ಮಪ್ಪ ಮುಕ್ರಿ ,ಯುವಮೋರ್ಚಾ ಅಧ್ಯಕ್ಷ ಶ್ರೀ ಜಗದೀಶ್ ಭಟ್ , ಯುವಮೋರ್ಚಾ ಜಿಲ್ಲಾ ಸದಸ್ಯ ಶ್ರೀ ಆದಿತ್ಯ ಶೇಟ್ ಹಾಗು ಮತ್ತಿತರ ಜವಾಬ್ದಾರಿಯುತ ಕಾರ್ಯಕರ್ತರು ಉಪಸ್ಥಿತರಿದ್ದರು.