ಹೊನ್ನಾವರ : ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸಾರಿಗೆ ಬಸ್ ಒಂದಕ್ಕೆ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರು ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಹೊನ್ನಾವರ ತಾಲೂಕಿನ ಅನಂತವಾಡಿ ಕೊಪ್ಪದಮಕ್ಕಿ ಸಮೀಪ ಈ ಘಟನೆ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭಟ್ಕಳ ಕಡೆಯಿಂದ ಹೊನ್ನಾವರಕ್ಕೆ ಬರುತ್ತಿದ್ದ ಸಾರಿಗೆ ಬಸ್ ಗೆ ಮಾರುತಿ ಇಕೋ ಕಾರ್ ಹಿಂಬದಿಯಿಂದ ಗುದ್ದಿದ ಪರಿಣಾಮ ಕಾರ್ ಮುಂಬಾಗ ಜಖಂಗೊಂಡಿದ್ದು ಕಾರ್ ನಲ್ಲಿದ್ದ
ಮೂವರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಮಾಡಗೇರಿಯ ಮಾರುತಿ ವೆಂಕಟ ನಾಯ್ಕ, ರಾಜೇಶ್ವರಿ ಪ್ರಕಾಶ ನಾಯ್ಕ, ನಾಗವೇಣಿ ವೆಂಕಟ ನಾಯ್ಕ ಎಂದು ಗುರುತಿಸಲಾಗಿದೆ. ಮಾರುತಿ ನಾಯ್ಕ ವಾಹನ ಚಾಲಕನಾಗಿದ್ದು ಈತ ತನ್ನ ಅಕ್ಕ ರಾಜೇಶ್ವರಿ ಎಂಬವರ ಜೊತೆ ತಾಯಿ ನಾಗವೇಣಿ ಎಂಬವರನ್ನು ಉದ್ಯಾವರಕ್ಕೆ ಕರೆದುಕೊಂಡು ಹೋಗಿ ವಾಪಸ್ ಮನೆಗೆ ಮರಳುವಾಗ
ಅಪಘಾತ ಸಂಭವಿಸಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಘಟನೆಯಿಂದಾಗಿ ಕೆಲಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು