ಬೆಂಗಳೂರು:ಸಮಸ್ತ ಹವ್ಯಕ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾದ ಅಖಿಲ ಹವ್ಯಕ ಮಹಾಸಭೆಯ ನೂತನ ಕಟ್ಟಡಕ್ಕೆ ಹವ್ಯಕ ಸಮಾಜದ ಗುರುಪೀಠವಾದ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಶ್ರೀ ಮಹಾಸ್ವಾಮಿಗಳು 07/09/2017 ರಂದು ಪ್ರಥಮ ಬಾರಿಗೆ ಆಗಮಿಸಲಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಹಾಸಭೆಗೆ ಪೂಜ್ಯ ಶ್ರೀಗಳು ಸಂಜೆ 4.00 ಗಂಟೆಗೆ ಆಗಮಿಸುತ್ತಿದ್ದು, ಪೂರ್ಣಕುಂಭ ಸ್ವಾಗತ, ಧೂಳಿಪಾದುಕಾಪೂಜೆ ನಡೆಯಲಿದೆ. ಸಂಜೆ 7.00 ಗಂಟೆಗೆ ಶ್ರೀಕರಾರ್ಚಿತ ಶ್ರೀರಾಮದೇವರ ಪೂಜೆ ಸಂಪನ್ನವಾಗಲಿದೆ. ಶುಕ್ರವಾರ ಬೆಳಗ್ಗೆ 10.00 ಗಂಟೆಗೆ  ಶ್ರೀಕರಾರ್ಚಿತ ಶ್ರೀರಾಮದೇವರ ಪೂಜೆ ನಡೆಯಲಿದ್ದು, ಮಧ್ಯಾಹ್ನ ನಡೆಯಲಿರುವ ಧರ್ಮ ಸಭೆಯಲ್ಲಿ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಮಸ್ತ ಹವ್ಯಕ ಮಹಾಸಭೆಯ ಸದಸ್ಯರನ್ನು ಆಶೀರ್ವದಿಸಲಿದ್ದಾರೆ.

RELATED ARTICLES  ಅನಂತಕುಮಾರ್ ಹೆಗಡೆ ಕಾರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಗಳ ಕಾರ್ಯಕರ್ತರು

ಇದೇ ಮೊದಲಬಾರಿಗೆ ಶ್ರೀಗಳು ಅಖಿಲ ಹವ್ಯಕ ಮಹಾಸಭೆಗೆ ಆಗಮಿಸುತ್ತಿರುವ ಕಾರಣ  ಸಮಸ್ತ ಸದಸ್ಯರು ಶ್ರೀಗಳ ಆಗಮನಕ್ಕಾಗಿ ಪೂರ್ವಸಿದ್ಧತೆಯೊಂದಿಗೆ ಕಾಯುತ್ತಿದ್ದಾರೆ.