ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನ ಪ್ರಕಾರ ರವಿವಾರ 69 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ. ಇಂದು ಕುಮಟಾದಲ್ಲಿ ಒಂದು ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಒಟ್ಟೂ ಸಾವಿನ ಸಂಖ್ಯೆ 746 ಕ್ಕೆ ಏರಿದೆ.

ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 12, ಅಂಕೋಲಾದಲ್ಲಿ 9, ಕುಮಟಾದಲ್ಲಿ 12, ಹೊನ್ನಾವರ 18, ಭಟ್ಕಳದಲ್ಲಿ 3, ಶಿರಸಿಯಲ್ಲಿ 8, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 1, ಮುಂಡಗೋಡ 5, ಹಳಿಯಾಳದಲ್ಲಿ 0, ಮತ್ತು ಜೋಯಿಡಾದಲ್ಲಿ 0 ಒಟ್ಟೂ 69 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ, ಸಿಎಂ ಸಿದ್ದರಾಮಯ್ಯ ಅನಾವರಣ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 481 ಆಗಿದ್ದು, ಅವರಲ್ಲಿ 117 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 364 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 6, ಅಂಕೋಲಾ‌ 5, ಕುಮಟಾ 14, ಹೊನ್ನಾವರ 13, ಭಟ್ಕಳ 0, ಶಿರಸಿ 23, ಸಿದ್ದಾಪುರ 0, ಯಲ್ಲಾಪುರ 3, ಮುಂಡಗೋಡ 0, ಹಳಿಯಾಳ 0, ಜೋಯ್ಡಾ 0 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 64 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಪಿ.ವಿ.ಸಿಂಧು ಸತತ ಎರಡನೇ ಬಾರಿ ಫೈನಲ್‌ಗೆ ಪ್ರವೇಶ.

ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಇಂದು ಹೊನ್ನಾವರದಲ್ಲಿ 18 ಕಾರವಾರ, ಕುಮಟಾದಲ್ಲಿ ಎರಡನೇ ಸ್ಥಾನ ಅಂದರೆ 12 ಜನರಲ್ಲಿ ಕರೋನಾ ಕಾಣಿಸಿಕೊಂಡಿದೆ.