ಕುಮಟಾ : ಪ್ರಸಕ್ತ ವರ್ಷದ ಸ್ವಾತಂತ್ರ್ಯ ದಿನಾಚರಣೆ ಭಾರತಕ್ಕೆ ವಿಶೇಷ. ಕಾರಣ ಇದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (75ನೇ ವರ್ಷ). 75ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಆಜಾದಿ ಕಾ ಅಮೃತಮಹೋತ್ಸವ್ದ ಕಾರ್ಯಕ್ರಮಗಳ ಸರಣಿಗೆ ಚಾಲನೆ ನೀಡಿದ್ದಾರೆ. ಇದು 2023ರ ಸ್ವಾತಂತ್ರ್ಯೋತ್ಸವದವರೆಗೂ ಮುಂದುವರಿಯಲಿದೆ. ಈ ನಡುವೆ ಕುಮಟಾ ಹಾಗೂ ಉತ್ತರಕನ್ನಡದ ಪ್ರತಿಭೆಗಳ ಸಮ್ಮಿಲನದಲ್ಲಿ ಸ್ವಾತಂತ್ರದ ಗೀತೆಯೊಂದು ಬಿಡುಗಡೆಯಾಗಿದ್ದು ಜನ ಮೆಚ್ಚುಗೆ ಪಡೆದಿದೆ.
ಗೀತೆಯ ಹಿಂದಿನ ಶಕ್ತಿ ಇವರುಗಳು.
ಗಾನ ನೃತ್ಯ ಸಂಗೀತ ವಾದ್ಯದೊಂದಿಗೆ ಸಮ್ಮಿಲಿತವಾದ ಈ ಗೀತೆಯನ್ನು ನೀವೂ ಕೇಳಿ…