ಕುಮಟಾ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನೆರವೇರಿತು.

ತೆಂಗಿನ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಮಟಾ- ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಕರ್ನಾಟಕ ರಾಜ್ಯಅಧ್ಯಕ್ಷರೂ ಆಗಿರುವ ಶ್ರೀ ದಿನಕರ ಕೆ. ಶೆಟ್ಟಿಯವರು ಮಾತನಾಡಿ, ಎಪ್ಪತೈದನೆಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವನಮಹೋತ್ಸವದಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಕಾಳಜಿಯನ್ನು ತೋರಿಸುತ್ತಿರುವುದಲ್ಲದೇ, ಇಂದು ನೆಡಲಾದ ಗಿಡಗಳನ್ನೆಲ್ಲ ಸೂಕ್ತ ಪಾಲನೆ ಪೋಷಣೆ ಮಾಡಬೇಕು. ಅಲ್ಲದೇ ನಮ್ಮ ತಾಲೂಕಿನ ವಿದ್ಯಾರ್ಥಿ ವಸತಿ ನಿಲಯಗಳಿಗೆ ಸಂಬಂಧಿಸಿದಂತೆ ಅಗತ್ಯವಿರುವ ಸೌಕರ್ಯಗಳನ್ನು ಪೂರೈಸಲು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಅಧ್ಯಕ್ಷನಾಗಿ ಪ್ರಯತ್ನಿಸುತ್ತೇನೆ ಎಂದರು.

RELATED ARTICLES  ಕ್ರೀಡೆ ಸಂಕುಚಿತ ಭಾವನೆಯನ್ನು ಹೊಡೆದು ಹಾಕಿ ವಿಶಾಲ ಮನೋಭಾವವನ್ನು ಬೆಳೆಸುತ್ತದೆ : ಪ್ರೋ.ಎಂ. ಜಿ ಭಟ್ಟ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ಶ್ರೀ ಈಶ್ವರ ನಾಯ್ಕರವರು ಮಾತನಾಡಿ ನಮ್ಮ ಶಾಸಕರು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ರಾಜ್ಯ ಅಧ್ಯಕ್ಷರಾಗಿರುವುದು ನಮಗೆ ಹೆಮ್ಮೆಯ ಸಂಗತಿ, ನಮ್ಮ ತಾಲೂಕಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವಂತಹ ಯೋಜನೆ ಬರುವಂತಾಗಲಿ ಎಂದರು. ತಹಶೀಲ್ದಾರರಾದ ಶ್ರೀ ವಿವೇಕ ಶೇಣ್ವಿ ಯವರು ಉತ್ತಮ ಪರಿಸರ,ಶಿಸ್ತುಬದ್ಧ ವಿದ್ಯಾರ್ಥಿ ಜೀವನದ ಅಗತ್ಯತೆ ಬಗ್ಗೆಸಾಂದರ್ಭಿಕವಾಗಿ ಅನಿಸಿಕೆ ವ್ಯಕ್ತಪಡಿಸಿದರು.

RELATED ARTICLES  ಚುನಾವಣೆ ಸಂದರ್ಭದಲ್ಲಿ ವ್ಯವಸ್ಥೆ ಹಾಳು ಮಾಡಲು ಬಂದರೆ ಹುಷಾರ್..! : ಎಡಿಜಿಪಿ ಅಲೋಕಕುಮಾರ್ ಎಚ್ಚರಿಕೆ

ಈ ಸಂದರ್ಭದಲ್ಲಿ ಕುಮಟಾ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಗೌಡ, ಸ್ಥಳೀಯ ವಾರ್ಡ್ ಸದಸ್ಯೆ ಶ್ರೀಮತಿ ಗೀತಾ ಮುಕ್ರಿ, ಪುರಸಭೆ ಮುಖ್ಯಾಧಿಕಾರಿ ಶ್ರೀ ಎಂ.ಕೆ.ಸುರೇಶ್, ಗ್ರೇಡ್2 ತಹಶೀಲ್ದಾರ್ ಶ್ರೀ ಸತೀಶ್ ಗೌಡ, ಶಿರಸ್ತೇದಾರ ಶ್ರೀ ಸಾಮಂತ್, ವಿವೇಕ ನಗರ ವಿಕಾಸ ಸಂಘದ ಉಪಾಧ್ಯಕ್ಷ ಶ್ರೀ ಎಸ್. ಐ. ನಾಯ್ಕ,ಲಾಯನ್ಸ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀ ಜಯದೇವ ಬಳಗಂಡಿ, ವಿದ್ಯಾರ್ಥಿಗಳು, ವಿದ್ಯಾರ್ಥಿ ವಸತಿ ನಿಲಯಗಳ ಮೇಲ್ವಿಚಾರಕರಾದ ಕೃಷ್ಣ ದೇವಾಡಿಗ, ಶ್ರೀಮತಿ ಶ್ಯಾಮಲಾ ನಾಯ್ಕ, ಶ್ರೀಮತಿ ಭವ್ಯಾ , ಸಿಬ್ಬಂದಿಗಳು ಉಪಸ್ಥಿತರಿದ್ದರು.

ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಣೇಶ್ ಪಟಗಾರ ಸ್ವಾಗತಿಸಿದರು, ತಾಲೂಕಾ ವಿಸ್ತರಣಾಧಿಕಾರಿ ಗಜಾನನ ಹೆಗಡೆ ವಂದಿಸಿದರು