ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಅತಿಹೆಚ್ಚು ಪ್ರಮಾಣದ ಲಸಿಕೆ ಲಭ್ಯವಿದ್ದು, 23,700 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊನ್ನಾವರ 3,000, ಅಂಕೋಲಾದಲ್ಲಿ 2,000 , ಭಟ್ಕಳ 3,400, ಹಳಿಯಾಳ 1,800, ಜೋಯ್ಡಾ 6,00 , ಕಾರವಾರ2,000, ಮುಂಡಗೋಡ 1,500, ಕುಮಟಾ 2,500, ಶಿರಸಿ 2,500, ಸಿದ್ದಾಪುರ 1,500, ಯಲ್ಲಾಪುರ 1,000, ದಾಂಡೇಲಿ 1,200, ನೇವಿ 200 ಮತ್ತು ಜಿಲ್ಲಾಸ್ಪತ್ರೆಯಲ್ಲಿ 5,00 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.
ಹೊನ್ನಾವರದಲ್ಲಿ ಎಲ್ಲಿ?
ಹೊನ್ನಾವರ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಾಗಲಿದ್ದು, ಹೊನ್ನಾವರ ತಾಲೂಕ ಆಸ್ಪತ್ರೆ, ಹಳದೀಪುರ ಮತ್ತು ಕರ್ಕಿ ಪಂಚಾಯತ, ಸಾಲ್ಕೋಡ, ಕಡತೋಕ ( ಚಂದಾವರ, ಹೊದಕೆ ಶೀರೂರು) ಹೊಸಾಡ (ಜಲವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ) ಖರ್ವಾದ 4 ಉಪಕೇಂದ್ರಗಳು, ಗೇರುಸೊಪ್ಪಾ, ಸಂಶಿ, ಬಳಕೂರು, ಮಂಕಿ ಈ ಪ್ರದೇಶಗಳಲ್ಲಿ ಲಸಿಕೆ ಲಭ್ಯವಾಗಲಿದೆ.
ಲಸಿಕೆಯನ್ನು ಪಡೆಯಲು ಬರುವವರು ಸೂಕ್ತವಾದ ಮಾಹಿತಿ ತಿಳಿದು ಆಯಾ ಸ್ಥಳದ ಹಾಗೂ ಆಯಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಆರೋಗ್ಯ ಇಲಾಖೆಗೆ ಸಂಬಂಧಪಟ್ಟವರಿಂದ ಅಧಿಕೃತ ಮಾಹಿತಿಯನ್ನು ಪಡೆದು ಹಾಜರಾಗತಕ್ಕದ್ದು ಗೊಂದಲ ಉಂಟುಮಾಡದಿರಿ ಎಂದು ಆರೋಗ್ಯ ಇಲಾಖೆಯಿಂದ ವಿನಂತಿಸಿಕೊಳ್ಳಲಾಗಿದೆ.
ಅಂಕೋಲಾದಲ್ಲಿಯ ಲಸಿಕಾ ಮಾಹಿತಿ.
ಅಗಸ್ಟ್ 16 ರ ಸೋಮವಾರ ಒಟ್ಟೂ 2000 ಕೋವಿಡ್ ಲಸಿಕೆಗಳು ಲಭ್ಯವಿದೆ. ಅಗಸೂರು ಹಾಗೂ ಹಾರವಾಡಾಗಳಲ್ಲಿ ತಲಾ 250ಡೋಸ್ ಗಳು ಲಭ್ಯವಿದ್ದು ಅವುಗಳಲ್ಲಿ (ಪ್ರಥಮ ಡೋಸ್ 120,ದ್ವಿತೀಯ ಡೋಸ್ 110 ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ 20 ) ಡೋಸ್ ಕಾಯ್ದಿರಿಸಲಾಗಿದೆ. ಹಟ್ಟಿಕೇರಿ ಹಾಗೂ ಮೊಗಟಾಗಳಲ್ಲಿ ಒಟ್ಟೂ 300 ಡೋಸ ಲಸಿಕೆ ಲಭ್ಯವಿದ್ದು ಅವುಗಳಲ್ಲಿ ( 1ನೇ ಡೋಸ್ ಗೆ 140, ದ್ವಿತೀಯ ಡೋಸ್ ಗೆ 140 ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ 20) ಡೋಸ್ ಕಾಯ್ದಿರಿಸಲಾಗಿದೆ.
ಮಂಜುಗುಣಿ ಹಾಗೂ ಬೇಲೆಕೇರಿಗೆ ತಲಾ 350 ಡೋಸ್ ಲಸಿಕೆ ಲಭ್ಯವಿದ್ದು ಅವುಗಳಲ್ಲಿ (ಪ್ರಥಮ ಡೋಸ್ 150,ದ್ವಿತೀಯ ಡೋಸ್ 150, ಹಾಗೂ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ 50 ಡೋಸ್ ಕಾಯ್ದಿರಿಸಲಾಗಿದೆ. ಬೆಳಸೆಯಲ್ಲಿ 200 ಡೋಸ್ ಲಭ್ಯವಿದ್ದು, (ಪ್ರಥಮ 80, ದ್ವಿತೀಯ 80 ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ 40 ) ಡೋಸ್ ಲಸಿಕೆ ಲಭ್ಯವಿದೆ ಎಂದು ವರದಿಯಾಗಿದೆ.
ಹೆಚ್ಚಿನ ಮಾಹಿತಿಯನ್ನು ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಶಾ ಕಾರ್ಯಕರ್ತೆಯನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು. ಕೊನೆ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ ಆರೋಗ್ಯ ಇಲಾಖೆ ಈ ಸ್ಥಳಗಳನ್ನು ಗುರುತಿಸಿದ್ದು ಜನತೆ ಗೊಂದಲ ಮಾಡಿಕೊಳ್ಳಬಾರದೆಂದು ತಿಳಿಸಲಾಗಿದೆ.