ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಅತಿಹೆಚ್ಚು ಪ್ರಮಾಣದ ಲಸಿಕೆ ಲಭ್ಯವಿದ್ದು ಒಟ್ಟೂ 23,700 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊನ್ನಾವರ 3,000, ಅಂಕೋಲಾದಲ್ಲಿ 2,000 , ಭಟ್ಕಳ 3,400, ಹಳಿಯಾಳ 1,800, ಜೋಯ್ಡಾ 6,00 , ಕಾರವಾರ2,000, ಮುಂಡಗೋಡ 1,500, ಕುಮಟಾ 2,500, ಶಿರಸಿ 2,500, ಸಿದ್ದಾಪುರ 1,500, ಯಲ್ಲಾಪುರ 1,000, ದಾಂಡೇಲಿ 1,200, ನೇವಿ 200 ಮತ್ತು ಜಿಲ್ಲಾಸ್ಪತ್ರೆಯಲ್ಲಿ 5,00 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.

ಭಟ್ಕಳದಲ್ಲಿ ತಾಲೂಕಿನಲ್ಲಿ ಎಲ್ಲೆಲ್ಲಿ?

ಭಟ್ಕಳ ತಾಲೂಕಿನಲ್ಲಿ ನಾಳೆ 3 ಕಡೆಗಳಲ್ಲಿ 1900 ಕೋವಿಡ್ ಲಸಿಕೆಗಳು ಲಭ್ಯವಿದೆ. ಕಾಪಿರೈಟ್ ವಿಸ್ಮಯ ಟಿ.ವಿ ತಾಲೂಕಿನ ನಿಶ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ಆಸರಕೇರಿ ಸಭಾಭವನದಲ್ಲಿ 900 ಮತ್ತು ಚೌಥನಿಯ ಕುದರೆ ಬೀರಪ್ಪ ದೇವಸ್ಥಾನದಲ್ಲಿ 500 ಹಾಗೂ ಹನುಮಾನ ನಗರದ ಗಣೇಶ ಸಭಾಭವನದಲ್ಲಿ 500 ಕೋವಿಡ್ ಲಸಿಕೆಗಳು ಲಭ್ಯವಿದ್ದು, ಭಟ್ಕಳದ ಜನತೆ ಇದರ ಸದುಪಯೋಗ ಪಡೆದುಕೊಳ್ಳ ಬಹುದಾಗಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 27-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?.

ಶಿರಸಿಯಲ್ಲಿ ಎಲ್ಲೆಲ್ಲಿ?

ಶಿರಸಿ ತಾಲೂಕಿನಲ್ಲಿ ಆ.16 ಸೋಮವಾರದಂದು 3,250 ಡೋಸ್ ಕೋವೀಶೀಲ್ಡ್ ಹಾಗೂ 500 ಡೋಸ್ ಕೋವ್ಯಾಕ್ಸೀನ್‌‌ ಲಸಿಕೆ ಲಭ್ಯವಿದೆ. ಅವುಗಳಲ್ಲಿ ಕೋವೀಶೀಲ್ಡ್ ಲಸಿಕೆಯು ದಾಸನಕೊಪ್ಪದಲ್ಲಿ 300 ಡೋಸ್, ಬಿಸ್ಲಕೊಪ್ಪ 300 ಡೋಸ್, ಸುಗಾವಿ 300 ಡೋಸ್, ಬನವಾಸಿ 300 ಡೋಸ್, ಹೆಗಡೆಕಟ್ಟಾ 300 ಡೋಸ್, ಸಾಲ್ಕಣಿ‌ 300 ಡೋಸ್, ಹುಲೇಕಲ್ 300 ಡೋಸ್, ರೇವಣ ಕಟ್ಟಾ 150 ಡೋಸ್, ಮೆಣಸಿ 150 ಡೋಸ್, ಕಕ್ಕಳ್ಳಿ 100 ಡೋಸ್, ಪತ್ರಿಕಾ ಭವನದಲ್ಲಿ 50 ಡೋಸ್, ಜೆ ಎಂ‌ ಎಫ಼್ ಸಿ ಯಲ್ಲಿ 200 ಡೋಸ್, ಗಣೇಶನಗರದಲ್ಲಿ 250 ಡೋಸ್, ವಿವೇಕಾನಂದ ನಗರ ಹಾಗೂ ಕೆ ಎಚ್ ಬಿ ಕಾಲನಿಯಲ್ಲಿ 250 ಡೋಸ್ ಲಭ್ಯವಿದ್ದು ಮೊದಲ ಹಾಗೂ ಎರಡನೇ ಡೋಸ್ ಪಡೆಯುವವರಿಗೆ ನೀಡಲಾಗುತ್ತದೆ. ಹಾಗೂ ಕೋವ್ಯಾಕ್ಸಿನ್ ಲಸಿಕೆಯು ನಗರ (UPHC) ಕೋಟೆಕೆರೆ ಸಮೀಪ ಅರ್ಬನ್ ಪ್ರೈಮರಿ ಹೆಲ್ತ್ ಸೆಂಟರ್ ಲಿ 500 ಡೋಸ್ ಲಭ್ಯವಿದ್ದು, ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಸುಳ್ಳು, ವಿಕೃತ ಸುದ್ದಿ ಹರಡುತ್ತಿರುವವರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಬೆಂಬಲ: ಅನಂತ್ ಕುಮಾರ್ ಹೆಗಡೆ ಕಿಡಿ