ಜಿಟಿಟಿಸಿ ( ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ) ಇದು 1972ರಲ್ಲಿ ಸ್ಥಾಪನೆಯಾದ ಕರ್ನಾಟಕ ಸರಕಾರ ಹಾಗೂ ಕೆನಡಾ, ಡೆನ್ಮಾರ್ಕ್ ಜಂಟಿಯಾಗಿ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ಇಲ್ಲಿ ಡಿಪ್ಲೊಮಾ, ಪೋಸ್ಟ್ ಡಿಪ್ಲೊಮಾ ಹಾಗೂ ಪಿಜಿ ವರೆಗೆ ಶಿಕ್ಷಣಕ್ಕೆ ಅವಕಾಶಗಳಿವೆ. ಇಲ್ಲಿ ಸಾಂಪ್ರದಾಯಿಕ ಹೈ ಟೆಕ್/ಆಟೊಮೇಟೆಡ್ ಹಾಗೂ ಸಾಫ್ಟ್‌ವೇರ್ ಆಧಾರಿತ ಕೋರ್ಸ್‌ಗಳಿವೆ. ಜಾಗತಿಕ ಮಟ್ಟದ ಬೆಳವಣಿಗೆಗಳನ್ನು ಗಮನಿಸಿಯೇ ಇಲ್ಲಿ ವೃತ್ತಿ ತರಬೇತಿಗಳನ್ನು ನೀಡುತ್ತಿದ್ದಾರೆ. ಇಲ್ಲಿ ಮಹಿಳೆಯರಿಗೆ ಮೀಸಲಾದ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ತರಬೇತಿ 3 ವರ್ಷದ್ದಾಗಿದೆ. ಇನ್ನುಳಿದಂತೆ ಟೂಲ್ ಅಂಡ್ ಡೈ ಮೇಕಿಂಗ್, ಪ್ರಿಸಿಪಿನ್ ಮ್ಯಾನುಪ್ಯಾಕ್ಟರಿಂಗ್ ಮೆಕಾಟ್ರಾನಿಕ್ಸ್ ತರಬೇತಿಗಳಿದ್ದು ಎಲ್ಲವೂ 3 ವರ್ಷದ ಅವಧಿಯಾಗಿದ್ದು 1 ವರ್ಷದ ಕಡ್ಡಾಯ ಕೈಗಾರಿಕಾ ತರಬೇತಿ ಇದೆ. ಇದು ಕರ್ನಾಟಕ ರಾಜ್ಯ ಸರಕಾರ ಹಾಗೂ ಎಐಸಿಟಿಇ ಮಂಡಳಿಯಿಂದ ಅಂಗೀಕೃತವಾಗಿದ್ದು ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 35 ಅಂಕ ಪಡೆದು ಉತ್ತೀರ್ಣರಾಗಿದ್ದು, ಕನಿಷ್ಠ 5 ವರ್ಷ ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸ ಪಡೆದಿರಬೇಕು. ಶೇ. 30 ರಷ್ಟು ಸೀಟುಗಳು ವಿದ್ಯಾರ್ಥಿನಿಯರಿಗೆ ಮೀಸಲಿದೆ.

ಜಿಟಿಟಿಸಿ ಡಿಪ್ಲೋಮಾ ಕೋರ್ಸುಗಳನ್ನು ಕ್ಲಾಸ್‌ರೂಮ್ ತರಬೇತಿಗಳಿಗಷ್ಟೇ ಸೀಮಿತಗೊಳಿಸದೆ ಪ್ರಾಯೋಗಿಕ ಹಾಗೂ ರಚಿನಾತ್ಮಕ ಕಲಿಕೆಗೆ ಒತ್ತು ನೀಡಿ ರೂಪಿಸಲಾಗಿದೆ.

ವಿದ್ಯಾರ್ಥಿಗಳಿಗೆ ವಿಜ್ಞಾನಗಳ ಜೊತೆಗೆ ಅತ್ಯಾಧುನಿಕ ಯಂತ್ರೋಪಕರಣಗಳಾದ ಸಿ.ಎನ್.ಸಿ. ಯಂತ್ರಗಳು, – ರೋಬೋಟೋಗಳು 3ಡಿ ಮುದ್ರಕಗಳು, ಸಿ.ಎಮ್.ಎಮ್ ಇತ್ಯಾದಿಗಳನ್ನು ಬಳಸಿ ಕಲಿಸಿಕೊಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ಆಧುನಿಕ ವಿನ್ಯಾಸ ಮತ್ತು ಸಿಮ್ಯುಲೇಶನ್ ಸಾಫ್ಟ್‌ವೇರ್‌ಗಳನ್ನು ಬಳಸಿ ಪಾಠ ಮಾಡಲಾಗುತ್ತದೆ.* ಕೈಗಾರಿಕೆ ಮತ್ತು ಕಂಪನಿಗಳ ಪಠ್ಯಕ್ರಮವನ್ನು ಇಂದಿನ ಮಾರುಕಟ್ಟೆಗಳ ಅಗತ್ಯಗಳಿಗನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

ಜಿಟಿಟಿಸಿ ಡಿಪ್ಲೋಮಾ, ಪಿ.ಡಿ.ಟಿ.ಡಿ ಮತ್ತು ಎಮ್.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದುವರೆಗೂ ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳಿವೆ. ದೇಶ, ವಿದೇಶಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಇರುವ ಬೇಡಿಕೆಯೇ ಇದಕ್ಕೆ ಸಾಕ್ಷಿಯಾಗಿದೆ.

ಜಿಟಿಟಿಸಿ ಪ್ರಾರಂಭದಿಂದ ಇಲ್ಲಿಯವರೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳಲು ನೆರವಾಗಿದೆ.

ಜಿಟಿಟಿಸಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರಿಗೆ ಲ್ಯಾಟರಲ್ ಎಂಟ್ರಿ ಮೂಲಕ ಇಂಜನಿಯರಿಂಗ್ ಕೋರ್ಸ್‌ಗಳಿಗೆ ದ್ವಿತೀಯ ವರ್ಷಕ್ಕೆ ನೇರ ಪ್ರವೇಶ ಹೊಂದಲು ಅವಕಾಶವಿರುತ್ತದೆ
ಎಸ್.ಸಿ/ಎಸ್.ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಸೌಲಭ್ಯವಿರುತ್ತದೆ
ಕೈಗಾರಿಕಾ ಪ್ರಾಯೋಜಿತ ಅಭ್ಯರ್ಥಿಗಳಿಗಾಗಿ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್‌ನಲ್ಲಿ ಆವಕಾಶ ಕಲ್ಪಿಸಲಾಗಿದೆ.

ಕಡ್ಡಾಯ ಒಂದು ವರ್ಷದ ಇಂಟರ್ನ್‌ಶಿಪ್ ತರಬೇತಿಯಿಂದಾಗಿ ವಿದ್ಯಾರ್ಥಿಗಳು ಕೈಗಾರಿಕಾ ವಾತಾವರಣಕ್ಕೆ ಹೊಂದಿಕೊಳ್ಳಲು ಸುಲಭವಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಸಹ ನೀಡಲಾಗುತ್ತದೆ. ಜಿಟಿಟಿಸಿ ಡಿಪ್ಲೋಮಾ ಕೋರ್ಸುಗಳು ಎಳುಸಿಟಿ (AICTE) ಹಾಗೂ ಡಿಟಿಇ (DTE) ಯಿಂದ ಅನುಮೋದಿತಗೊಂಡಿವೆ.

ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ

(DTE/AICTE ನಿಯಮಗಳ ಅನ್ವಯ ಪ್ರವೇಶ ಮಾನದಂಡಗಳಿರುತ್ತವೆ). ಅರ್ಹತೆ: 10ನೇ ತರಗತಿ ಅಥವಾ CBSE, ICSE ಯಲ್ಲಿ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ಪ್ರದೇಶ, ಮೆಂಟ್ ಕಮ್ ರೋಸ್ಟರ್ ಸಿಸ್ಟಂ ಮತ್ತು ಕೌನ್ಸೆಲಿಂಗ್ ಮೂಲಕ (ವಿದ್ಯಾರ್ಥಿಯ ಕರ್ವಾಟಕದಲ್ಲಿ ಕನಿಷ್ಠ ವರ್ಷಗಳ ಅವಧಿ ಅಧ್ಯಯನ ಮಾಡಿರಬೇಕು.

100% Placement ನೆರವು.

ಐ ಟಿ ಆಯ್ ಪೂರ್ಣ ಗೊಳಿಸಿದ ಅರ್ಹ ಅಭ್ಯರ್ಥಿಗಳಿಗೆ 2 ನೇ ವರ್ಷದ ಡಿಪ್ಲೋಮಾ ತರಗತಿಗಳಿಗೆ ನೇರ ಪ್ರವೇಶ
ಐಟಿಐನಲ್ಲಿ ಟರ್ನರ್/ ಮೆಕ್ಯಾನಿಸ್ಟ್/ ಫಿಟ್ಟರ್/ ಟರ್ನರ್/ ಟೂಲ್ ಅಂಡ್ ಡೈ ಮೇಕಿಂಗ್/ ಎಲೆಕ್ಟ್ರೀಷಿಯನ್ ಟ್ರೇಡ್‌ನಲ್ಲಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ನೇರವಾಗಿ ಡಿಪ್ಲೊಮಾದ 2 ನೇ ವರ್ಷದ ತರಬೇತಿಗೆ ಎಐಸಿಟಿಐ/ಡಿಟಿಇ ನಿಯಮಾವಳಿ ಪ್ರಕಾರ ಲ್ಯಾಟರಲ್ ಪ್ರವೇಶ ಪಡೆಯಬಹುದಾಗಿದೆ. ಕರ್ನಾಟಕದಲ್ಲಿ 22 ಜಿಟಿಟಿಸಿಗಳಿವೆ.

ಪೋಸ್ಟ್ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಮೆಕ್ಯಾನಿಕಲ್ ಹಿನ್ನೆಲೆಯ ಡಿಪ್ಲೊಮಾ/ಬಿಇ ಇದ್ದವರು ಒಂದು ವರ್ಷದ ಅವಧಿಯ ಟೂಲ್ ಡಿಸೈನ್ ಹಾಗೂ ಮೆಟೆರಾಲಜಿ ಮೆಷರ್‌ಮೆಂಟ್‌ನಲ್ಲಿ ಪೋಸ್ಟ್ ಡಿಪ್ಲೊಮಾ ಕೋರ್ಸ್‌ಗೆ ಸೇರಬಹುದು. ಎಸ್‌ಎಸ್‌ಎಲ್‌ಸಿ ಫೇಲ್ ಆದವರು ಕೂಡ ಒಂದು ವರ್ಷದ ಟೂಲ್‌ರೂಮ ಮೆಕ್ಯಾನಿಸ್ಟ್,, 2 ವರ್ಷದ ಟೂಲ್ ಅಂಡ್ ಡೈ ಟೆಕ್ನೀಷಿಯನ್ ಹಾಗೂ 4 ತಿಂಗಳ ಟರ್ನರ್, ಮಿಲ್ಲರ್, ಗ್ರೈಂಡರ್ ಫಿಟ್ಟರ್ ಕೋರ್ಸ್‌ಗಳಿಗೆ ಸೇರಬಹುದಾಗಿದೆ.

R.K Balachandra