ಕುಮಟಾ: ದೇವಸ್ಥಾನ ಕಳ್ಳತನ ಆರೋಪಿಯನ್ನು
ಗೋಕರ್ಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಮಟಾ ತಾಲೂಕಿನ ಗೋಕರ್ಣದ ಬಂಗ್ಲೆಗುಡ್ಡದ ನಿವಾಸಿ 21 ವರ್ಷದ ಕೃಷ್ಣ ರಾಜು ಗೌಂಡಿ ಬಂಧಿತ ಆರೋಪಿ. ಗೋಕರ್ಣದ ವೈತರಣಿಯ ಗ್ರಾಮ ದೇವತೆಯಾದ ವನದುರ್ಗಾ ದೇವಸ್ಥಾನದ ದೇವ ಮೂರ್ತಿಯ ಮೇಲಿದ್ದ ಬೆಳ್ಳಿಯ ಕರಿಮಣಿ, ಲಕ್ಷ್ಮಿಯ ಲಾಕೆಟ್, ಬೆಳ್ಳಿಯ ಚೈನ್, ಬೆಳ್ಳಿಯ ಗಣಪತಿ ಮೂರ್ತಿ, ಬೆಳ್ಳಿಯ ನಾಗರ ಮೂರ್ತಿ, ಹಿತ್ತಾಳೆ ನಾಗರಮೂರ್ತಿ, ತಾಮ್ರದ ಕೊಡ,ಹಿತ್ತಾಳೆ ಆರತಿ, ನೀರಾಂಜನ, ಹಿತ್ತಾಳೆ ಏಕ ಆರತಿ, ಕಾಣಿಕೆ ಡಬ್ಬದಲ್ಲಿದ್ದ 520 ರೂ. ಸೇರಿದಂತೆ ಒಟ್ಟೂ 25 ಸಾವಿರ ರೂ. ಮೌಲ್ಯದ ವಸ್ತುಗಳ ಕಳ್ಳತನ ನಡೆರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಗೋಕರ್ಣ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ, ಭಟ್ಕಳ ಡಿವೈಎಸ್‌ಪಿ ಬೆಳ್ಳಿಯಪ್ಪ, ಕುಮಟಾ ಶಿವಪ್ರಕಾಶ್ ನಾಯ್ಕ ಮಾರ್ಗದರ್ಶನದಲ್ಲಿ ಗೋಕರ್ಣ ಪಿಎಸ್‌ಐ ನವೀನ ನಾಯ್ಕ, ಹಾಗೂ ಸುಧಾ ಅಘನಾಶಿನಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ತಿಮ್ಮಪ್ಪ ಬೇಡುಮನೆ, ಅರವಿಂದ ಶೆಟ್ಟಿ, ವಸಂತ ನಾಯಕ್, ರಾಜೇಶ ನಾಯ್ಕ, ಸಚಿನ ನಾಯ್ಕ, ನಾಗರಾಜ ಪಟಗಾರ, ಕಿರಣಕುಮಾರ, ಗೋರಕನಾಥ ರಾಣೆ, ಅರುಣ ಮುಕ್ಕಣ್ಣನವರ್, ಮಂಜುನಾಥ ಹಾಗೂ ಪ್ರಕಾಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.