ಭಟ್ಕಳ: ತಾಲೂಕಿನ ಸಾಗರರೋಡ್ ಬಳಿ ಬೈಕ್‌ ಹಾಗೂ ಪುರಸಭಾ ವಾಹನದ ನಡುವೆ ಅಪಘಾತ ಸಂಭವಿಸಿದ್ದು ವಾಹನ ಬಡಿದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಚಲಿಸುತ್ತಿದ್ದ ಎದುರಿನಿಂದ ಬಂದ ಪುರಸಭಾ ವಾಹನ ಬಡಿದ ಪರಿಣಾಮವಾಗಿ ಬೈಕ್ ಸವಾರ ತಾಲೂಕಿನ ಹಾಡುವಳ್ಳಿ ಕುಂಟವಾಣಿ ನಿವಾಸಿ, ಮಾವಳ್ಳಿ ಗ್ರಾಪಂ ಕಾರ್ಯದರ್ಶಿ ಮಂಜುನಾಥ ಮಂಗಳಾ ಗೊಂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.

RELATED ARTICLES  ಇಂದು ನೇರ ಫೋನ್– ಇನ್ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ: ನೀವೂ ನೇರವಾಗಿ ಪ್ರಶ್ನೆ ಕೇಳಬಹುದು.

ಅಪಘಾತದಿಂದಾಗಿ ಬೈಕ್ ಸವಾರನ ಕೈಗೆ ಬಲವಾದ ಏಟು ಬಿದ್ದಿದೆ. ಅಪಘಾತದಿಂದ ಕೈಗೆ ಬಲವಾದ ಪೆಟ್ಟು ಬಿದ್ದು ಕೈ ಇಂದ ತೀವೃತರವಾದ ತಕ್ತಸ್ರಾವವಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

RELATED ARTICLES  ಶ್ರೀ ಯಶೋಧರ ನಾಯ್ಕ ಟ್ರಸ್ಟ್ ನಿಂದ ಸಂಯೋಜನೆಗೊಂಡಿತು ಚರ್ಚಾ ಸ್ಪರ್ಧೆ

ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಬೈಕ್ ಕುಂಟವಾಣಿಯಿoದ ಭಟ್ಕಳದ ಕಡೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪುರಸಭಾ ವಾಹನದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.