ಕುಮಟಾ : ಅದೆಷ್ಟೇ ಪ್ರಕರಣಗಳು ನಡೆದರೂ ಜನರ ಮೋಜು ಮಸ್ತಿಯ ಹವ್ಯಾಸ ಮುಗಿಯೋದೆ ಇಲ್ಲ ಅನ್ನಿಸುತ್ತೆ. ಸಮುದ್ರ ಸ್ನಾನದ ಆ ಆಹ್ಲಾದಕರ ಸನ್ನಿವೇಶ ಅದೆಷ್ಟು ಚಂದವೋ ಅಷ್ಟೇ ಅಪಾಯಕಾರಿ. ಸಮುದ್ರದಲ್ಲಿ ಮೋಜಿಗೆ ಇಳಿದವರು ನೀರು ಪಾಲಾದ ಘಟನೆ ವರದಿಯಾಗಿದೆ.
ಪ್ರವಾಸಕ್ಕೆಂದು ಬಂದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ತಾಲೂಕಿನ ಬಾಡದ ಕಡಲತೀರದಲ್ಲಿ ನಡೆದಿದೆ. ದಾವಣಗೆರೆ ಮೂಲದ ಮೇಘಾ ಮತ್ತು ರೇಣುಕಾ ಪ್ರಸಾದ್ ಪ್ರವಾಸಕ್ಕೆ ಬಾಡದ ಹುಬ್ಬಣಗೇರಿ ಕಡಲತೀರಕ್ಕೆ ಬಂದಿದ್ದರು. ಈ ವೇಳೆ ಈಜಲು ತೆರಳಿದ್ದಾರೆ. ಈಜಲು ತೆರಳಿದಾಗ ಸುಳಿಯ ರಭಸಕ್ಕೆ ಸಿಲುಕಿದ್ದು, ಮೇಘಾ ಎನ್ನುವ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾರೆಂದು ವರದಿಯಾಗಿದೆ.
ಈ ದುರ್ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಮೇಘಾಳ ಮೃತದೇಹ ಪತ್ತೆಯಾಗಿದ್ದು, ಇನ್ನೊರ್ವ ವಿದ್ಯಾರ್ಥಿಯ ಸುಳಿವು ಇನ್ನೂ ಸಿಕ್ಕಿಲ್ಲವಾಗಿದ್ದು ಹುಡುಕಾಟ ಮುಂದುವರಿದಿದೆ.ಕುಮಟಾ ಪೊಲೀಸರು ಭೇಟಿ ನೀಡಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಊರಿವರೂ ಸ್ಥಳದಲ್ಲಿ ಸೇರಿದ್ದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.