ಯಲ್ಲಾಪುರ: ಸಹಕಾರಿ ಸಂಘಗಳು ಬದುಕಿಗಾಗಿ ಸಂಘರ್ಷ ನಡೆಸುತ್ತಿರುವ ಬಡವರ್ಗದವರ ನೆರವಿಗೆ ಬರಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದರು.
ಪಟ್ಟಣದ ಸೋಮೇಶ್ವರ ಕಾಂಪ್ಲೆಕ್ಸ್‍ನಲ್ಲಿ ಶ್ರೀಗುರು ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಯಾವುದೇ ಬಿಕ್ಕಟ್ಟಿಲ್ಲದೇ ಒಗ್ಗಟ್ಟಾಗಿ ಸಾಗಬೇಕು ಎಂದರು. ಸಂಘ ಬ್ರಹ್ಮರ್ಷಿ ನಾರಾಯಣಗುರು ಅವರ ಜಯಂತಿಯ ದಿವಸ ಉದ್ಘಾಟನೆಗೊಂಡಿದ್ದು, ಅವರ ಆಶಯದಂತೆ ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿರದೇ, ಎಲ್ಲ ಸಮಾಜದ ಬಡವರ್ಗದವರಿಗೂ ಅನುಕೂಲ ಕಲ್ಪಿಸುವಂತಾಗಬೇಕು ಎಂದರು.
ಪ.ಪಂ ಅಧ್ಯಕ್ಷ ಶಿರೀಷ ಪ್ರಭು  ಉದ್ಘಾಟಿಸಿದರು. ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ಉದ್ಯಮಿ ಎಂ. ಎಲ್. ನಾಯ್ಕ, ಸಮಗ್ರ ನಾಮಧಾರಿ ಸಂಘದ ಅಧ್ಯಕ್ಷ ಆರ್. ಐ. ನಾಯ್ಕ, ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಗೌಸ್, ವ್ಯವಸ್ಥಾಪಕ ಮನೋಜ ನಾಯ್ಕ ಇದ್ದರು.

RELATED ARTICLES  ಹಿಂದೂ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಆದೇಶ ವಿರೋಧಿಸಿ ಪ್ರತಿಭಟನಾ ಸಭೆ