ಕುಮಟಾ: ಕ್ಷುಲ್ಲಕ ಕಾರಣಕ್ಕೆ ಅಪರಿಚಿತ ವ್ಯಕ್ತಿಗಳ ಗುಂಪು ವೃದ್ಧೆಯ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ಗೋಕರ್ಣದ ಸಮೀಪದ ಭೀಮಕೊಂಡದಲ್ಲಿಂದು ನಡೆದಿದೆ. 65 ವರ್ಷದ ಸುಬ್ಬಿ ಸೋಮ್ ಗೌಡ ಹಲ್ಲೆಗೊಳಗಾದ ವೃದ್ಧಿಯಾಗಿದ್ದಾಳೆ. ಕ್ಷುಲ್ಲಕ ವಿಷಯಕ್ಕೆ ಅಪರಚಿತ ವ್ಯಕ್ತಿಗಳು ಗುಂಪು ಕಟ್ಟಿಕೊಂಡು ಭೀಮಕೊಂಡದಲ್ಲಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ವೃದ್ದೆಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳು ವೃದ್ಧಿಯನ್ನು ಚಿಕಿತ್ಸೆ ನೀಡಲಾಗಿದೆ. ಅಪರಿಚಿತ ವ್ಯಕ್ತಿಗಳ ಶೋಧ ಕಾರ್ಯ ನಡೆದಿದೆ. ತನಿಖೆ ನಂತರದಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.