ಕುಮಟಾ : ಕಾರವಾರದಿಂದ ಕುಮಟಾ ಮಾರ್ಗವಾಗಿ ಬೆಂಗಳೂರು ಸಂಚರಿಸುವ ವೀಸ್ಟಾ ಡೋಮೋ ರೈಲು ವಿಶೇಷ ಸೌಲಭ್ಯ ಹೊಂದಿದ್ದು, ರೈಲಿನಲ್ಲಿ ಕುಳಿತು ಅಕ್ಕ ಪಕ್ಕದ ಪರಿಸರ , ಪಶ್ಚಿಮ ಘಟ್ಟಗಳ ಹಾಗೂ ಕರಾವಳಿಯ ಸೊಬಗನ್ನು ನೋಡುತ್ತಾ ಸಂಚರಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಕೊಂಕಣ ರೇಲ್ವೆ ಸದ್ಯರಾದ ಶಾಸಕಾದ ಶ್ರೀ ದಿನಕರ ಶೆಟ್ಟಿ ಹಾಗೂ ಕೊಂಕಣ ರೇಲ್ವೆ ಸದಸ್ಯರಾದ ಶ್ರೀ ರಾಜೀವ್ ಗಾಂವ್ಕರ್ ಅವರು ಕೇಂದ್ರ ಸರ್ಕಾರದ ರೇಲ್ವೆ ಸಚಿವರ ಜೊತೆ ಮಾತನಾಡಿ, ಮಾನ್ಯ ಕೇಂದ್ರ ರೇಲ್ವೆ ಸಚಿವರ ಬಳಿ ವೀಸ್ಟಾ ಡೋಮೋ ಬೆಂಗಳೂರು-ಮಂಗಳೂರು ವರೆಗಿನ ವಿಶೇಷ ಸೌಲಭ್ಯ ರೈಲನ್ನು ಕಾರವಾರದ ವರೆಗೆ ಸಂಚರಿಸುವಂತೆ ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿಕೊಂಡಿದ್ದರು, ಸಚಿವರು ವಿನಂತಿಗೆ ಸ್ಪಂದಿಸಿ ಕಾರವಾರದ ವರೆಗೆ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇಂದು ಕುಮಟಾ ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ, ಕುಮಟಾ ರೇಲ್ವೆ ನಿಲ್ದಾಣದಲ್ಲಿ ಶಾಸಕರಾದ ದಿನಕರ ಶೆಟ್ಟಿ ಅವರು ವೀಸ್ಟಾ ಡೋಮೋ ರೈಲಿನ ಬೋಗಿಯನ್ನು ಉದ್ಘಾಟಿಸಿ ಮಾತನಾಡಿ ಜಿಲ್ಲೆಯ ಜನರು ಈ ರೈಲಿನಲ್ಲಿ ಸಂಚರಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಶ್ರೀ ಹೇಮಂತ್ ಕುಮಾರ್ ಗಾವಂಕರ್, ಕೊಂಕಣ ರೇಲ್ವೆ ಸದಸ್ಯರಾದ ಶ್ರೀ ರಾಜೀವ್ ಗಾಂವ್ಕರ್, ಉತ್ತರ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರಾದ ಶ್ರೀ ನವೀನ್ ಕುಮಾರ್, ಕುಮಟಾ ಮಂಡಲ ಹಿಂದೂಳಿದ ಮೋರ್ಚಾ ಅಧ್ಯಕ್ಷರಾದ ಶ್ರೀ ವಿಶ್ವನಾಥ ನಾಯ್ಕ, ಪುರಸಭಾ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಮುರುಡೇಶ್ವರದಲ್ಲಿ ಸ್ವಾಗತ
ಇಂದು ಬೆಳಿಗ್ಗೆ ಮುರ್ಡೇಶ್ವರಕ್ಕೆ ಆಗಮಿಸಿದ ಕಾರವಾರ- ಬೆಂಗಳೂರು ನೂತನ ರೈಲಿಗೆ ಮುರ್ಡೇಶ್ವರದ ರಿಕ್ಷಾ ಚಾಲಕರ ಹಾಗೂ ಚಾಲಕರ ಸಂಘ ಮಾವಳ್ಳಿ ಮುರ್ಡೇಶ್ವರ ಮತ್ತು ನಾಗರಿಕ ವೇದಿಕೆ ಪದಾಧಿಕಾರಿಗಳು ಮತ್ತು ಮುರ್ಡೇಶ್ವರದ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ನ ಪದಾಧಿಕಾರಿಗಳು ಹೋಟೆಲ್ ಸಿಬ್ಬಂದಿಗಳು ಊರ ನಾಗರಿಕರು ಸ್ವಾಗತಿಸಿ ಹೂವಿನಿಂದ ಸಿಂಗರಿಸಿ ಪೂಜೆ ಮಾಡಿ ಪಟಾಕಿ ಹೊಡೆದು ಸಿಂಹಿ ಹಂಚಿ ಸಂಭ್ರಮಿಸಿ ಮುಂದಿನ ನಿಲ್ದಾಣಕ್ಕೆ ಅನುವು ಮಾಡಿಕೊಟ್ಟರು.ಈ ಸಂಧರ್ಭದಲ್ಲಿ ರಿಕ್ಷಾ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಹಾಗೂ ಪದಾಧಿಕಾರಿಗಳು ,ನಾಗರಿಕ ವೇದಿಕೆ ಅಧ್ಯಕ್ಷ ಎಸ್ ಎಸ್ ಕಾಮತ್,ಇನ್ನೂ ಮುಂತಾದ ಪ್ರಮುಖ ನಾಯಕರು,ಆಟೋ ಚಾಲಕರು, ಊರ ನಾಗರಿಕರು ಉಪಸ್ಥಿತರಿದ್ದರು.