ಕುಮಟಾ: ಅಗಸ್ಟ ೨೦ ಭಾರತೀಯ ಸಂವಿಧಾನದ ೮ ನೇಯ ಪರಿಚ್ಛೇದದಲ್ಲಿ ಕೊಂಕಣಿ ಭಾಷೆಗೆ ಅಧಿಕೃತ ಮಾನ್ಯತೆ ದೊರೆತ ದಿವಸ.ಈ ದಿವಸದ ಸಂಭ್ರಮಾಚರಣೆಯನ್ನು ದೇಶದಾದ್ಯಂತ ಅನೇಕ ಕೊಂಕಣಿ ಸಂಘ ಸಂಸ್ಥೆಗಳವರು ವಿಜ್ರಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಕುಮಟಾದ ಕೊಂಕಣಿ ಪರಿಷದ್ ಕೂಡ ಪ್ರತೀ ವರ್ಷವೂ ಈ ಕಾರ್ಯವನ್ನು ಆಚರಿಸಿಕೊಂಡು ಬರುತಲಿದ್ದು ಈ ವರ್ಷವೂ ಕೂಡ ಈ ಕಾರ್ಯಕ್ರಮವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯೊಂದಿಗೆ ಜೋಡಿಸಿಕೊಂಡು ನೆರವೇರಿಸಲು ತೀರ್ಮಾನಿಸಲಾಗಿದ್ದು ಕಾರ್ಯಕ್ರಮವು ಅಗಷ್ಟ 22 ರಂದು ಭಾನುವಾರ ಅಪರಾಹ್ನ 4 ಗಂಟೆಯಿಂದ ಕುಮಟಾದ ನಾದಶ್ರೀ ಕಲಾ ಕೇಂದ್ರದಲ್ಲಿ ನೆರವೇರಲಿದೆ .
ಈ ಸಂದರ್ಭದಲ್ಲಿ ಉದಯೋನ್ಮುಖ ಕೊಂಕಣಿ ಲೇಖಕಿ ಶ್ರೀಮತಿ ವನಿತಾ ಶಿರೀಷ ನಾಯಕ ರವರು ಬರೆದ “ಪಾರಿಜಾತ” ಕೊಂಕಣಿ ಕವನ ಸಂಕಲನ ಬಿಡುಗಡೆಮಾಡಲಾಗುತ್ತದೆ.ಕೊಂಕಣಿ ಸಾಹಿತಿ ಕಲಾವಿದ ಶ್ರೀ ವಾಸುದೇವ ಶಾನಭಾಗ ಶಿರಸಿ ಇವರು ಈ ಕಾರ್ಯಕ್ರಮ ನೆರವೇರಿಸಲಿದ್ದಾರೆ.ಪ್ರಾಚಾರ್ಯೆ ಪ್ರೊ ಪ್ರೀತಿ ಭಂಡಾರಕರ ಅವರು ಪುಸ್ತಕದ ಪರಿಚಯ ಮಾಡಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಮಟಾ ಪುರಸಭೆಯ ಸದಸ್ಯ ಶ್ರೀ ಟೋನಿ ರೊಡ್ರಗೀಸ್.ಕೊಂಕಣಿ ಅಕಾಡೆಮಿ ಸದಸ್ಯ ಚಿದಾನಂದ ಭಂಡಾರಿ ಪಾಲ್ಗೊಳ್ಳಲಿದ್ದಾರೆ.
ಕೊಂಕಣಿ ಪರಿಷದ್ ಕುಮಟಾ ಇದರ ಉಪಾಧ್ಯಕ್ಷ ಶ್ರೀ ಮುರಳೀಧರ ಪ್ರಭು ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಲಿದ್ದಾರೆ ಪರಿಷದ್ ಅಧ್ಯಕ್ಷ ಶ್ರೀ ಅರುಣ ಉಭಯಕರ್ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕೊಂಕಣಿ ಮಾತೃಭಾಷಿಕ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ ಹಾಗೂ ವಿವಿಧ ಕೊಂಕಣಿ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಂಕಣಿ ಪರಿಷದ್ ಕಾರ್ಯದರ್ಶಿ ಶ್ರೀಮತಿ ನಿರ್ಮಲಾ ಪ್ರಭು ಪತ್ರಿಕೆಗಳಿಗೆ ತಿಳಿಸಿದ್ದಾರೆ.