ಕಾರವಾರ: ಉತ್ತರಕನ್ನಡದ ಜನರಿಗೆ ಸಿಹಿ ಸುದ್ದಿಯಿದ್ದು ನಾಳೆ ಅತೀ ಹೆಚ್ಚು ಲಸಿಕೆ ಉತ್ತರಕನ್ನಡದ ಜನರಿಗೆ ಲಭ್ಯವಾಗಲಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 10 ಸಾವಿರ ಕೋವಿಡ್ ಲಸಿಕೆ ಲಭ್ಯವಿದೆ ಎಂದು ಜಿಲ್ಲಾಡಳಿತದ ಮಾಹಿತಿ ತಿಳಿಸಿದೆ.
ನಾಳೆ ಉತ್ತರಕನ್ನಡದ ತಾಲೂಕುಗಳಾದ ಕುಮಟಾ 1,000, ಶಿರಸಿ 1,000, ಸಿದ್ದಾಪುರ 6,00, ಯಲ್ಲಾಪುರ 6,00, ದಾಂಡೇಲಿ 5,00, ಅಂಕೋಲಾ 700, ಭಟ್ಕಳ 1,200 , ಹಳಿಯಾಳ 800, ಹೊನ್ನಾವರ 1,200, ಜೋಯ್ಡಾ 600, ಕಾರವಾರ 900, ಮುಂಡಗೋಡಿನಲ್ಲಿ 600 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ. ಮತ್ತು ಜಿಲ್ಲಾಸ್ಪತ್ರೆಯಲ್ಲಿ 300 ಕೋವಿಶೀಲ್ಸ್ ವ್ಯಾಕ್ಸಿನ್ ಲಭ್ಯವಿದೆ.
ಸಾರ್ವಜನಿಕರು ಸುಖಾಸುಮ್ಮನೆ ಗೊಂದಲ ಮಾಡಿಕೊಳ್ಳುತ್ತಿದ್ದು, ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು ,ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆಯಾ ಸ್ಥಳದಲ್ಲಿ ಲಸಿಕೆ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.
ನಾಳೆ ಹೊನ್ನಾವರದಲ್ಲಿ ಎಲ್ಲಿ..?
ನಾಳೆ ಹೊನ್ನಾವರ ತಾಲೂಕಿನ ಕರ್ಕಿ, ಖರ್ವಾ, ಮಂಕಿ ಹಾಗೂ ಹೊನ್ನಾವರದ ಮಾರ್ಥೋಮಾ ಶಾಲಾ ಆವಾರದಲ್ಲಿ ಲಸಿಕಾಕರಣ ಪ್ರಕ್ರಿಯೆ ನಡೆಯಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂಕೋಲಾದಲ್ಲಿ ಎಲ್ಲೆಲ್ಲಿ?
ಅಂಕೋಲಾ ತಾಲೂಕಿನಲ್ಲಿ ಬುಧವಾರ ಒಟ್ಟೂ 700 ಕೋವಿಡ್ ಲಸಿಕೆಗಳು ಲಭ್ಯವಿದೆ. ಹೊನ್ನೆಕೇರಿ ಹಾಗೂ ಬೇಳೆಬಂದರಗಳಲ್ಲಿ ತಲಾ 200ಡೋಸ್ ಗಳು ಲಭ್ಯವಿದ್ದು ಅವುಗಳಲ್ಲಿ ಪ್ರಥಮ ಡೋಸ್ (90),ದ್ವಿತೀಯ ಡೋಸ್ ( 90) ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ (20 ) ಡೋಸ್ ಕಾಯ್ದಿರಿಸಲಾಗಿದೆ. ವಂದಿಗೆ ಹಾಗೂ ಸಕಲ ಬೇಣಗಳಲ್ಲಿ ತಲಾ 150 ಡೋಸ ಲಸಿಕೆ ಲಭ್ಯವಿದ್ದು ಅವುಗಳಲ್ಲಿ 1ನೇ ಡೋಸ್ ಗೆ (70), ದ್ವಿತೀಯ ಡೋಸ್ ಗೆ (70) ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ (10) ಡೋಸ್ ಲಸಿಕೆ ಕಾಯ್ದಿರಿಸಲಾಗಿದೆ.