ಹೊನ್ನಾವರ : ದಿನಾಂಕ 14-08-2021 ರಂದು ಮೀನುಗಾರಿಕೆಗಾಗಿ ಬೋಟ್ ಮೂಲಕ ಆಳ ಸಮುದ್ರಕ್ಕೆ ತೆರಳಿದ್ದ ವೇಳೆ ಅರಬ್ಬಿ ಸಮುದ್ರದಲ್ಲಿರುವ ಬಸವರಾಜ ದುರ್ಗದ ಸಮೀಪ ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ಒಳಗಿಂದ ನೀರಲ್ಲಿ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿ ಮೂರು ದಿನದ ನಂತರ ಶವವಾಗಿ ಪತ್ತೆಯಾಗಿದ್ದಾನೆ.

ಕುಮಟಾ ತಾಲೂಕಿನ ಕಲ್ಲಟ್ಟೆ ಕಂದವಳ್ಳಿಯ ಗೋಪಾಲ ಗೌಡ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಆತನ ಶವ ಇಂದು ಸಮುದ್ರ ತೀರದಲ್ಲಿ ಪತ್ತೆಯಾಗಿದೆ.ಮಂಗಳವಾರ ಕುಮಟಾ ಹೆಡ್ ಬಂದರ್ ಬೀಚ್ ಬಳಿ ಈತನ ಶವ ಪತ್ತೆಯಾಗಿದೆ.

RELATED ARTICLES  ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಮೂವರನ್ನು ಬಂಧಿಸಿದ ಕುಮಟಾ ಪೊಲೀಸರು.

ಗೋಪಾಲ ಗೌಡ ಮೀನುಗಾರಿಕೆಗೆ ತೆರಳಿದ್ದಾಗ ಅಗಸ್ಟ್ 14 ರ ಸಂಜೆ 7-30 ರ ಸುಮಾರಿಗೆ ಕಾಲು ಜಾರಿ ಬಿದ್ದು ಕಾಣೆಯಾದ ಬಗ್ಗೆ ಗೋಪಾಲ ಗೌಡನ ಬಾವ ಚಂದ್ರಶೇಖರ ರಾಮ ಗೌಡ ಎಂಬವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

RELATED ARTICLES  ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವು

ಬಸವರಾಜ ದುರ್ಗಾ ಬಳಿ ಸಾಕಷ್ಟು ಹುಡುಕಾಟ ನಡೆಸಿದ್ದರೂ ಗೋಪಾಲ ಗೌಡನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈತನಿಗೆ 5 ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು ಎನ್ನಲಾಗಿದೆ. ಇದೀಗ ಈತ ಕೈ ಹಿಡಿದ ಮಡದಿ, 2 ವರ್ಷ ವಯಸ್ಸಿನ ಮಗಳು,ವಯಸ್ಸಾದ ತಂದೆ ತಾಯಿಯನ್ನು ಅಗಲಿದ್ದಾನೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.