ಕಾರವಾರ : ಒಂದೆಡೆ ಕೊರೋನಾ ಅಲೆಯ ಆತಂಕ ಹೆಚ್ಚಾಗಿದ್ದು ಇನ್ನೊಂದೆಡೆ ಉತ್ತರ ಕನ್ನಡದ ಜನತೆಗೆ ಪ್ರವಾಹದ ಭೀತಿ ಹಾಗೂ ಪ್ರವಾಹದಿಂದಾದ ಅನಾಹುತಗಳು ನೋವಿನ ಮೇಲೆ ನೋವು ತರುತ್ತಿದೆ. ಇಂತಹ ಸಂದರ್ಭದಲ್ಲಿ ಶಾಸಕರು ಪಾಲಿನ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿ ಮಾದರಿಯಾಗಿದ್ದಾರೆ.
ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವರು ಬರೆದುಕೊಂಡಿದ್ದು, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಇದಕ್ಕೆ ಜನರು ಸ್ಪಂದಿಸಬೇಕೆಂದು ಬರೆದುಕೊಂಡಿದ್ದಾರೆ.
ಶಾಸಕರ ಮಾತು
ಕೋವಿಡ್-19 ರ ಮೂರನೇ ಅಲೆಯ ಆತಂಕ ಹಾಗೂ ಪ್ರವಾಹದ ಕಾರಣಕ್ಕಾಗಿ ಈ ಬಾರಿಯೂ ಸಹ ನನ್ನ ಜನ್ಮದಿನವನ್ನು ಆಚರಿಸುತ್ತಿಲ್ಲ. ದಯವಿಟ್ಟು ಯಾರೂ ಶುಭಾಶಯ ತಿಳಿಸಲು ಹೂವು, ಕೇಕ್ ತರಬಾರದು. ಅದಕ್ಕೆ ವ್ಯಯಿಸುವ ಹಣವನ್ನು ಬಡವರಿಗೆ, ಅನಾಥರಿಗೆ, ಕೋವಿಡ್ ಹಾಗೂ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿ. ದುಂದು ವೆಚ್ಚಕ್ಕೆ ವ್ಯಯಿಸುವ ಹಣವನ್ನು ಸಂಕಷ್ಟಕ್ಕೆ ಒಳಗಾದವರಿಗೆ ನೆರವು ನೀಡಿ ಎಂದು ವಿನಂತಿಸುತ್ತೇನೆ. ಎಂದು ಸ್ವತಃ ಶ್ರೀಮತಿ ರೂಪಾಲಿ ಎಸ್. ನಾಯ್ಕ ವಿನಂತಿಸಿದ್ದಾರೆ ಎನ್ನಲಾಗಿದೆ.