ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನವರೆಗೆ 460 ಕೊರೊನಾ ಪ್ರಕರಣಗಳು ಸಕ್ರಿಯವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸಕ್ರಿಯ ಇರುವ ಪ್ರಕರಣಗಳಲ್ಲಿ ಕಾರವಾರ 95, ಅಂಕೋಲಾ 72, ಕುಮಟಾ 63, ಹೊನ್ನಾವರ 82, ಭಟ್ಕಳ 32, ಶಿರಸಿ 58, ಸಿದ್ದಾಪುರ 11, ಯಲ್ಲಾಪುರ 25, ಮುಂಡಗೋಡ 19, ಹಳಿಯಾಳ 3 ಹಾಗೂ ಜೋಯಿಡಾದಲ್ಲಿ 1 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 348 ಸೋಂಕಿತರು ಹೋಂ ಐಸೋಲೇಶನ್ನಲ್ಲಿದ್ದರೆ 112 ಮಂದಿ ಜಿಲ್ಲೆಯ ವಿವಿಧ ಕೋವಿಡ್ ಕೇಂದ್ರಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರಕನ್ನಡದಲ್ಲಿ ನಿನ್ನೆ 43 ಕೋವಿಡ್ ಕೇಸ್ ದಾಖಲಾಗಿದೆ. ಜಿಲ್ಲೆಯಲ್ಲಿ ಒಂದು ಸಾವಾಗಿದೆ. ಇನ್ನೊಂದೆಡೆ, 36 ಸೋಂಕಿತರು ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಯಲ್ಲಾಪುರ, ಮುಂಡಗೋಡ, ಹಳಿಯಾಳ ಹಾಗೂ ಜೋಯಿಡಾಗಳಲ್ಲಿ ಯಾವುದೇ ಪ್ರಕರಣಗಳು
ದೃಢಪಟ್ಟಿಲ್ಲ.
ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 12, ಅಂಕೋಲಾದಲ್ಲಿ 4, ಕುಮಟಾದಲ್ಲಿ 8, ಹೊನ್ನಾವರ 6, ಭಟ್ಕಳದಲ್ಲಿ 5, ಶಿರಸಿಯಲ್ಲಿ 5, ಸಿದ್ದಾಪುರದಲ್ಲಿ 3, ಯಲ್ಲಾಪುರದಲ್ಲಿ 0, ಮುಂಡಗೋಡ 0, ಹಳಿಯಾಳದಲ್ಲಿ 0, ಮತ್ತು ಜೋಯಿಡಾದಲ್ಲಿ 0 ಒಟ್ಟೂ 43 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಕಾರವಾರ 3, ಅಂಕೋಲಾ 6, ಕುಮಟಾ 16, ಹೊನ್ನಾವರ 5, ಭಟ್ಕಳ 4, ಶಿರಸಿ 2, ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 0, ಜೋಯ್ಡಾ 0 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 36 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.
ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಇಂದು ಕಾರವಾರ ಅತಿ ಹೆಚ್ಚು 12, ಕುಮಟಾದಲ್ಲಿ ಎರಡನೇ ಸ್ಥಾನ ಅಂದರೆ 8 ಜನರಲ್ಲಿ ಕರೋನಾ ಕಾಣಿಸಿಕೊಂಡಿದೆ.