ಕುಮಟಾ :ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತ ಸಂಸ್ಕ್ರತಿಉಪನ್ಯಾಸ ವೇದಿಕೆ ಕುಮಟಾ, ಇವರ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಭಗವದ್ಗೀತೆಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನುಜಿಲ್ಲಾ ಪಂಚಾಯತ್ ಸದಸ್ಯ ಪ್ರದೀಪ ನಾಯಕದೇವರ ಬಾವಿ ಅವರು ಉದ್ಘಾಟಿಸಿ ಮಾತನಾಡಿ ಶಿಕ್ಷಕ ವೃತ್ತಿ ಶ್ರೇಷ್ಟವಾದದ್ದುಗುರು ಶಿಷ್ಯರ ಬಾಂಧವ್ಯಅತ್ಯಂತ ಮಹತ್ವವಾದದ್ದುಎಂದರು.
ಬಹುಮಾನ ವಿತರಕರಾಗಿ ಆಗಮಿಸಿದ ಬೆಳಕು ಟ್ರಸ್ಟನ್‍ಅದ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಮಾತನಾಡಿ ನಮ್ಮ ಸಂಸ್ಕ್ರತಿಯಲ್ಲಿ ಗುರುಗಳಿಗೆ ಉನ್ನತವಾದ ಸ್ಥಾನವಿದೆ.ಶ್ರೇಷ್ಟ ಶಿಕ್ಷಕ ಡಾ|| ರಾಧಾಕೃಷ್ಣ ಸರ್ವಪಲ್ಲಿಅವರಜನ್ಮ ದಿನಾಚರಣೆಯ ನಿಮಿತ್ತಎಲ್ಲೆಡೆ ಶಿಕ್ಷಕರನ್ನು ಗೌರವಿಸಲಾಗುತ್ತಿದೆ.ಮಕ್ಕಳು ದೇಶದ ಭವಿಷ್ಯಅವರ ಸರ್ವೊತೋಮುಖ ಬೆಳವಣಿಗೆಯೊಂದಿಗೆ ಅವರನ್ನುಉತ್ತಮ ನಾಗರಿಕರನ್ನಾಗಿಸುವಜವಾಬ್ದಾರಿ ಶಿಕ್ಷಕರದ್ದಾಗಿದೆ. ಹಿಂದುತ್ವದ ಮಹತ್ವ, ಆಚರಣೆ, ಮೂಲತತ್ವಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳುವುದರೊಂದಿಗೆ ಅವರನ್ನುದೇಶಪ್ರೇಮಿಯನ್ನಾಗಿಸಬೇಕು ಈ ನಿಟ್ಟಿನಲ್ಲಿಇಂತಹಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯಎಂದರು.
ಸಂಸ್ಕøತಿಉಪನ್ಯಾಸ ವೇದಿಕೆಯಅದ್ಯಕ್ಷರಾದ ಪ್ರೊ|| ವಿಷ್ಣು ಜೋಷಿ ಅವರು ಮಾತನಾಡಿ ಪ್ರತಿ ಶಾಲೆಗಳಲ್ಲಿಯು ಭಗವಧ್ಗೀತೆಯ ಪುಸ್ತಕ ಹಂಚಲಾಗುತ್ತಿದ್ದು ಆ ಮೂಲಕ ಮಕ್ಕಳಲ್ಲಿ ಭಗವದ್ಗೀತೆಯ ಮಹತ್ವವನ್ನು ಸಾರಲಾಗುತ್ತಿದೆಎಂದರು.ರಾಜೇಶ ಮಹಾಲೆಯವರು ಮಾತನಾಡಿ ಪ್ರತಿಯೊಬ್ಬ ಮನುಷ್ಯನಲ್ಲೂದೈವಾಂಶವಿರುತ್ತಿದ್ದು ಸರಿತಪ್ಪು ತಿಳಿದು ನಡೆಯಬೇಕುಎಂದರು.
ರಾಮು ನಾಯ್ಕಅವರು ಸರ್ವರನ್ನು ಸ್ವಾಗತಿಸಿದರು.ಮುಖ್ಯಾಧ್ಯಾಪರು ಪ್ರಸ್ತಾವಿಕ ಮಾತುಗಳನ್ನಾಡಿದರು.