ಹೊನ್ನಾವರ: ತಾಲೂಕಿನ ಮೂರುಕಟ್ಟೆಯ ಸನಿಹದಲ್ಲಿ ಬೈಕ್ ಮತ್ತು ಆಲ್ಟೊ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ವರದಿಯಾಗಿದೆ.
ರಸ್ತೆಯಲ್ಲಿದ್ದ ದನ ತಪ್ಪಿಸಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆಲ್ಟೊ ಕಾರ್ ಚಾಲಕ ದನ ಇದೆ ಎನ್ನುವ ಕಾರಣಕ್ಕೆ ಏಕಾಏಕಿ ಕಾರನ್ನು ಬಲಕ್ಕೆ ತಿರುಗಿಸಿದ್ದು, ಈ ವೇಳೆ ಬೈಕ್ ಗೆ ಗುದ್ದಿದ್ದಾನೆ ಎನ್ನಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ವಲ್ಕಿಯ ಅನ್ಸಾರ್ ಅಬ್ದುಲ್ ರೆಹಮಾನ್ ಬೊಂಗ್ಯಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಬೈಕ್ ನಲ್ಲಿ ಇಬ್ಬರು ಸವಾರರಿದ್ದು ಇನ್ನೋರ್ವನಿಗೆ ಗಾಯಗಳಾಗಿದೆ ಎನ್ನಲಾಗಿದೆ. ಹೊನ್ನಾವರದಿಂದ ವಲ್ಕಿ ಕಡೆಗೆ ಹೋಗುತ್ತಿದ್ದಾಗ ಮೂರುಕಟ್ಟೆ ಬಳಿ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಾಗಿದ್ದಾರೆ. ಘಟನೆಗೆ ಸಂಬoಧಿಸಿದoತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.